ಸಾಲಬಾಧೆಯಿಂದ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನ
ರಾಮನಗರ;ಸಾಲಬಾಧೆಯಿಂದ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದು ಘಟನೆಯಲ್ಲಿ ಮಹಿಳೆ ಮೃತಪಟ್ಟು 6 ಜನರು ಗಂಭೀರವಾಗಿರುವ ಘಟನೆ ದೊಡ್ಡಮಣ್ಣಗುಡ್ಡೆಯಲ್ಲಿ ನಡೆದಿದೆ.
ಮಂಗಳಮ್ಮ(28) ಮೃತ ಮಹಿಳೆಯಾಗಿದ್ದಾರೆ.ಮಂಗಳಮ್ಮ ಗಂಡ ರಾಜು ಸಾಲ ಮಾಡಿದ್ದರು ಆದರೆ ಸಾಲ ತೀರಿಸಲು ಆದಾಯ ಇರಲಿಲ್ಲ.ಸಾಲಗಾರರ ಕಿರಿಕಿರಿಯು ಇತ್ತು ಎನ್ನಲಾಗಿದೆ.
ಮಂಗಳಮ್ಮ ಪತಿ ರಾಜು, ತಾಯಿ ಸೊಮ್ಮಪುರದಮ್ಮ, ಮಕ್ಕಳಾದ ಆಕಾಶ್, ಕೃಷ್ಣ, ತಂಗಿ ಸವಿತಾ ,ಸವಿತಾ ಪುತ್ರಿ ದರ್ಶಿನಿ ಅವರು ಇಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಗಂಭೀರ ಸ್ಥಿತಿಯಲ್ಲಿರುವರನ್ನು ಮಂಡ್ಯದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಕುರಿತು ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.