ಉಮ್ರಾ ಯಾತ್ರೆಯಿಂದ ವಾಪಾಸ್ಸಾದ ನಟಿ ರಾಖಿ ಸಾವಂತ್

ನಟಿ ರಾಖಿ ಸಾವಂತ್ ಉಮ್ರಾ ಯಾತ್ರೆಗೆ ತೆರಳಿದ್ದು,ಅವರು ಮೆಕ್ಕಾದಿಂದ ಗುರುವಾರ ಮುಂಬೈಗೆ ಮರಳಿದ್ದು ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಅವರಿಗೆ ಸ್ವಾಗತವನ್ನು ಮಾಡಿದ್ದಾರೆ.

ಮಾಜಿ ಬಿಗ್ ಬಾಸ್ ಸ್ಪರ್ಧಿ ರಾಖಿ ಸಾವಂತ್ ಸೌದಿ ಅರೇಬಿಯಾಕ್ಕೆ ಕೆಲವು ಸ್ನೇಹಿತರೊಂದಿಗೆ ಯಾತ್ರೆಗೆ ತೆರಳಿದ್ದರು.

ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ, ಸುತ್ತಲೂ ನೆರೆದಿದ್ದವರಿಗೆ ಫೋಟೋಗ್ರಾಫರ್ ಗಳಿಗೆ “ರಾಖಿ ಅಲ್ಲ, ನನ್ನನ್ನು ಫಾತಿಮಾ ಎಂದು ಕರೆಯಿರಿ (ರಾಖಿ ನಹಿ, ಫಾತಿಮಾ ಬೋಲೋ)” ಎಂದು ಹೇಳಿದರು.

ಆ ಬಳಿಕ ಛಾಯಾಗ್ರಾಹಕರು ಫಾತಿಮಾ ಫಾತಿಮಾ.. ಎಂದು ಕರೆಯಲು ಪ್ರಾರಂಭಿಸಿದರು.ಒಬ್ಬಾತ ಆಕೆಯ ಕೊರಳಿಗೆ ಹಾರವನ್ನು ಹಾಕಲು ಪ್ರಯತ್ನಿಸಿದ.ಆದರೆ ರಾಖಿ ಅವನ ಕೈಯಿಂದ ಹಾರವನ್ನು ತೆಗೆದುಕೊಂಡರು.

ರಾಖಿ ಸಾವಂತ್ ಆದಿಲ್ ದುರಾನಿ ಅವರನ್ನು ಮದುವೆಯಾಗಿದ್ದರು.ಆ ಬಳಿಕ ಅವರು ವಿಭಿನ್ನ ವಿಚಾರಕ್ಕೆ ಸುದ್ದಿಯಾಗಿದ್ದರು.ಇದೀಗ ಪವಿತ್ರ ಮೆಕ್ಕಾ ಯಾತ್ರೆ ನಡೆಸಿ ಊರಿಗೆ ವಾಪಾಸ್ಸಾಗಿದ್ದಾರೆ.

ಟಾಪ್ ನ್ಯೂಸ್