ನವದೆಹಲಿ;ಕಳೆದ ಐದು ವರ್ಷಗಳಲ್ಲಿ ದೇಶಾದ್ಯಂತ ಪೊಲೀಸ್ ಕಸ್ಟಡಿಯಲ್ಲಿ ಬರೊಬ್ಬರಿ 669 ಮಂದಿ ಮೃತಪಟ್ಟಿದ್ದಾರೆಂದು ಅಂಕಿ ಅಂಶವೊಂದು ಬಹಿರಂಗವಾಗಿದೆ.
ಕೇಂದ್ರ ಗೃಹ ಸಚಿವಾಲಯವು ರಾಜ್ಯಸಭೆಗೆ ನೀಡಿದ ಉತ್ತರದಲ್ಲಿ ಈ ಮಹತ್ವದ ಅಂಕಿ ಅಂಶಗಳನ್ನು ಬಹಿರಂಗಪಡಿಸಿದೆ.
2021-22ರಲ್ಲಿ 175,2020-21ರಲ್ಲಿ 100,2019-20ರಲ್ಲಿ 112,2018-19ರಲ್ಲಿ 136 ಮತ್ತು 2017-18ರಲ್ಲಿ 146 ಕಸ್ಟಡಿ ಸಾವುಗಳ ಪ್ರಕರಣ ನಡೆದಿದೆ.
ಇನ್ನು 201 ಪ್ರಕರಣಗಳಲ್ಲಿ ಒಟ್ಟು 5,80,74,998 ರೂ.ಗಳ ವಿತ್ತೀಯ ಪರಿಹಾರವನ್ನು ಮತ್ತು ಒಂದು ಪ್ರಕರಣದಲ್ಲಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದ್ದಾರೆ.