ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಸಬ್ ಇನ್ಸ್ ಪೆಕ್ಟರ್; ಠಾಣೆಗೆ ನುಗ್ಗಿ ಥಳಿಸಿದ ಜನ

4 ವರ್ಷದ ಬಾಲಕಿಯ ಮೇಲೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಓರ್ವರು ಅತ್ಯಾಚಾರವೆಸಗಿರುವ ಆರೋಪ ಕೇಳಿ ಬಂದಿದ್ದು, ಪೊಲೀಸ್‌ ಠಾಣೆಯ ಮುಂದೆ ಜಮಾಯಿಸಿದ ಸ್ಥಳೀಯರು ಪೊಲೀಸ್‌ ಅಧಿಕಾರಿಗೆ ಥಳಿಸಿರುವ ಘಟನೆ ರಾಜಸ್ಥಾನ ದೌಸಾ ಜಿಲ್ಲೆಯಲ್ಲಿ ನಡೆದಿದೆ.

ಎಎಸ್ಪಿ ರಾಮಚಂದ್ರ ಸಿಂಗ್ ನೆಹ್ರಾ ಈ ಕುರಿತು ಮಾಹಿತಿಯನ್ನು ನೀಡಿದ್ದು, ದೌಸಾ ಜಿಲ್ಲೆಯ ಲಾಲ್ಸೋಟ್ ಪ್ರದೇಶದಲ್ಲಿ ಘಟನೆ ನಡೆದಿದೆ. ಭೂಪೇಂದ್ರ ಸಿಂಗ್ ಎಂಬ ಆರೋಪಿತ ಸಬ್ ಇನ್ಸ್‌ಪೆಕ್ಟರ್ ಮಧ್ಯಾಹ್ನ ಅಪ್ರಾಪ್ತಿಯನ್ನು ತನ್ನ ಕೋಣೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಇದೀಗ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಚುನಾವಣಾ ಕರ್ತವ್ಯದಲ್ಲಿದ್ದ ಭೂಪೇಂದ್ರ ಸಿಂಗ್ ಬಾಲಕಿಯನ್ನು ತನ್ನ ಕೋಣೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.

ವಿಷಯ ತಿಳಿದು ಸ್ಥಳೀಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಾಹುವಾಸ್ ಪೊಲೀಸ್ ಠಾಣೆಗೆ ತೆರಳಿ ಮುತ್ತಿಗೆ ಹಾಕಿದ್ದಾರೆ.ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.ಆರೋಪಿತ ಪೊಲೀಸ್‌ ಅಧಿಕಾರಿಗೆ ಥಳಿಸಿದ್ದಾರೆ.

ಭಾರತೀಯ ಜನತಾ ಪಕ್ಷದ ಸಂಸದ ಕಿರೋಡಿ ಲಾಲ್ ಮೀನಾ ಕೂಡ ಸ್ಥಳಕ್ಕಾಗಮಿಸಿ,ಲಾಲ್ಸೋಟ್‌ನಲ್ಲಿ ದಲಿತ ಬಾಲಕಿಯ ಮೇಲೆ ಪೋಲೀಸ್‌ ಅಧಿಕಾರಿಯೊಬ್ಬರು ಅತ್ಯಾಚಾರವೆಸಗಿದ ಘಟನೆಯಿಂದ ಜನರಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.ಅಮಾಯಕ ಮಗುವಿಗೆ ನ್ಯಾಯ ದೊರಕಿಸಿಕೊಡಲು ಸ್ಥಳಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು