ನನ್ನ ದೇಹ ಮಾರಿ ಕೋಟ್ಯಾಂತರ ಸಂಪಾದಿಸಿದ್ರು; ನನಗೆ ನ್ಯಾಯ ಕೊಡಿಸಿ, ಅಜ್ಞಾತ ಸ್ಥಳದಿಂದ ವಿಡಿಯೋ ಮೂಲಕ ಆಗ್ರಹಿಸಿದ ಯುವತಿ

ರಾಜಸ್ಥಾನದ ಬಿಲ್ವಾರದಲ್ಲಿ 10 ವರ್ಷಗಳ ಹಿಂದೆ ಮಾರಾಟವಾಗಿ ವೇಶ್ಯಾವಾಟಿಕೆ ದಂಧೆಗೆ ಸಿಲುಕಿದ್ದ ಯುವತಿ ನಿರ್ಜನ ಪ್ರದೇಶದಿಂದ ವಿಡಿಯೋ ಮಾಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾಳೆ.

10 ವರ್ಷದವಳಿದ್ದಾಗ ನನ್ನನ್ನು ಮಾರಾಟ ಮಾಡಿದ್ರು, ಅಂದಿನಿಂದ ಕಾಲ ಕಾಲಕ್ಕೆ ನನ್ನ ದೇಹವನ್ನು ಮಾರಾಟ ಮಾಡಿ ಕೋಟಿಗಟ್ಟಲೇ ಸಂಪಾದಿಸಿದರು. ನಾನೀಗ ನೊಂದಿದ್ದೇನೆ ನನಗೆ ನ್ಯಾಯ ಕೊಡಿಸಿ ಎಂದು ಯುವತಿ ಅಜ್ಞಾತ ಸ್ಥಳದಲ್ಲಿದ್ದುಕೊಂಡು ವೀಡಿಯೋ ಮಾಡಿಬಿಟ್ಟಿದ್ದಾಳೆ.

ನಾನು 10 ವರ್ಷದವಳಿದ್ದಾಗ ಮಾಧೋಪುರದಲ್ಲಿ ನನ್ನನ್ನು ಮಾರಾಟ ಮಾಡಿದರು. 11ನೇ ವರ್ಷದಲ್ಲಿ ಬಲವಂತವಾಗಿ ನನ್ನನ್ನ ವೇಶ್ಯಾವಾಟಿಕೆಗೆ ತಳ್ಳಿದರು. ಒಂದೆರಡು ವರ್ಷ ಮಾಧೋಪುರದಲ್ಲಿ ಇಟ್ಟುಕೊಂಡು ನಂತರ ನನ್ನನ್ನು ಬೇರೆ ಸ್ಥಳಕ್ಕೆ ಮಾರಾಟ ಮಾಡಿದರು. ಇಲ್ಲಿನ ಡಿಯೋಲಿ ನಗರದಲ್ಲಿ ಕಿಶನ್ ಎಂಬ ವ್ಯಾಪಾರಿ 20 ಲಕ್ಷ ರೂ.ಗೆ ನನ್ನನ್ನು ಖರೀದಿಸಿ 8-9 ವರ್ಷಗಳ ಕಾಲ ನನ್ನನ್ನು ಬಳಸಿಕೊಂಡು ವ್ಯಾಪಾರ ಮಾಡಿಕೊಂಡ ಎಂದು ಹೇಳಿದ್ದಾರೆ.

ನಂತರ ಜೈಪುರ, ಮುಂಬೈಗೆ ಮಾರಾಟ ಮಾಡಿದ. ಅಲ್ಲಿಯೂ ಕೋಟ್ಯಂತರ ರೂಪಾಯಿ ಸಂಪಾದಿಸಿಕೊಟ್ಟೆ. ಶಂಭು ಮತ್ತು ಪ್ರೇಮ್ ಎಂಬ ಇಬ್ಬರು ಕಾಮುಕರು ನನಗೆ ಸಾಕಷ್ಟು ಹಿಂಸೆ ನೀಡಿದರು. ನನಗಷ್ಟೇ ಅಲ್ಲದೇ ಇತರ ಹೆಣ್ಣುಮಕ್ಕಳನ್ನೂ ಹಿಂಸಿಸುತ್ತಿದ್ದರು. ಬೇರೆ ಬೇರೆ ಕಡೆ ವ್ಯಾಪಾರ ಮಾಡುವಂತೆ ಒತ್ತಾಯ ಮಾಡಿದ್ದರು ಎಂದು ಹೇಳಿದ್ದಾರೆ.

ನಾನು ಇಂತಹ ದೌರ್ಜನ್ಯಗಳಿಂದ ಬೇಸತ್ತಿದ್ದೇನೆ, ತುಂಬಾ ನೊಂದಿದ್ದೇನೆ. ಅವರಿಂದ ನಾನು ತಪ್ಪಿಸಿಕೊಂಡು ಈ ವೀಡಿಯೋ ಮಾಡುತ್ತಿದ್ದೇನೆ. ನನಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com