BIG NEWS ಪ್ರವಾದಿ ನಿಂದನೆ ಪ್ರಕರಣ; ವ್ಯಾಪಕವಾಗಿ ಭುಗಿಲೆದ್ದ ಪ್ರತಿಭಟನೆ ಹಿನ್ನೆಲೆ, ಬಿಡುಗಡೆಗೊಂಡಿದ್ದ ಬಿಜೆಪಿ ಶಾಸಕನ ಮತ್ತೆ ಬಂಧನ

ಪ್ರವಾದಿ ನಿಂದನೆ ಪ್ರಕರಣ;ವ್ಯಾಪಕವಾಗಿ ಭುಗಿಲೆದ್ದ ಪ್ರತಿಭಟನೆ ಹಿನ್ನೆಲೆ,ಬಿಡುಗಡೆಗೊಂಡಿದ್ದ ಬಿಜೆಪಿ ಶಾಸಕನ ಮತ್ತೆ ಬಂಧನ




ಹೈದರಾಬಾದ್:ಪ್ರವಾದಿ ಮುಹಮ್ಮದ್‌ ರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಉಚ್ಚಾಟಿತ ಶಾಸಕ ಟಿ ರಾಜಾ ಸಿಂಗ್ ಅವರನ್ನು ವ್ಯಾಪಕ ಪ್ರತಿಭಟನೆ ಹಿನ್ನೆಲೆ ಇಂದು ಮತ್ತೆ ಬಂಧಿಸಲಾಗಿದೆ.




ಬಿಜೆಪಿ ಶಾಸಕ ರಾಜಾಸಿಂಗ್ ಪ್ರವಾದಿ‌ ನಿಂದನೆ ವಿಡಿಯೋ ವೈರಲ್ ಆಗುತ್ತಿದ್ದಂತೆ ವ್ಯಾಪಕವಾಗಿ ಹೈದರಾಬಾದ್ ನಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು.‌ಇದರ ಬೆನ್ನಲ್ಲೇ ಅವರನ್ನು ಮಂಗಳವಾರ ಬೆಳಗ್ಗೆ ಬಂಧಿಸಲಾಗಿತ್ತು. ಸಂಜೆ ಬಿಡುಗಡೆ ಮಾಡಲಾಗಿತ್ತು.

ಇದರಿಂದ ಹೈದರಾಬಾದ್ ನಲ್ಲಿ ಮತ್ತೆ ವ್ಯಾಪಕ ಪ್ರತಿಭಟನೆ ನಡೆದಿತ್ತು,ಲಾಠೀ ಚಾರ್ಜ್ ನಡೆದಿತ್ತು.ಹಲವು ಪ್ರತಿಭಟನಾಕಾರರ ಬಂಧನ ಕೂಡ ಆಗಿದೆ.




ರಾಜಾ ಸಿಂಗ್ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಧರ್ಮದ ಆಧಾರದ ದ್ವೇಷವನ್ನು ಉತ್ತೇಜಿಸುವುದು,ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು,ಧಾರ್ಮಿಕ ಭಾವನೆಗಳಿಗೆ ಅವಮಾನಿಸುವ ಮೂಲಕ ಮತ್ತು ಇತರರಲ್ಲಿ ಕ್ರಿಮಿನಲ್ ಬೆದರಿಕೆ ಹಾಕುವ ಉದ್ದೇಶ ಮುಂತಾದ ಪ್ರಕರಣಗಳೊಂದಿಗೆ ಎಫ್‌ಐಆರ್ ದಾಖಲಿಸಲಾಗಿದೆ.







ಟಾಪ್ ನ್ಯೂಸ್