ನವದೆಹಲಿ(16-02-2022) : ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ನಾಲ್ವರು ಯುವಕರು ರೈಲಿನಡಿ ಸಿಲುಕಿ ಮೃತಪಟ್ಟ ದುರಂತ ಘಟನೆ ಗುರುಗ್ರಾಮ್ ರೈಲ್ವೇ ಮೇಲ್ಸೇತುವೆ ಬಳಿ ನಡೆದಿದೆ.
ದೇವಿಲಾಲ್ ಕಾಲೋನಿ ನಿವಾಸಿಗಳಾದ ಸಮೀರ್ (19), ಮೊಹಮ್ಮದ್ ಅನಸ್ (20), ಯೂಸುಫ್(21) ಮತ್ತು ಯುವರಾಜ್ (18) ಮೃತ ಯುವಕರು.
ಶತಾಬ್ದಿ ಎಕ್ಸ್ಪ್ರೇಸ್ ಗುರುಗಾಮ್ ರೈಲು ನಿಲ್ದಾಣದಿಂದ ಬಸಾಯಿ ರೈಲು ನಿಲ್ದಾಣದ ಕಡೆಗೆ ಚಲಿಸುತ್ತಿದ್ದಾಗ ಸಂಜೆ 5 ಗಂಟೆಗೆ ಅಪಘಾತ ಸಂಭವಿಸಿದೆ. 18 ರಿಂದ 21 ವರ್ಷ ವಯಸ್ಸಿನ ನಾಲ್ವರು ಯುವಕರು ರೈಲು ಸಮೀಪಿಸುತ್ತಿದ್ದಾಗ ಹಳಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ನಿಂತಿದ್ದರು. ರೈಲು ಸಾಕಷ್ಟು ಸಮೀಪ ಬಂದರು ಸಹ ಯುವಕರು ಫೋಟೋದಲ್ಲಿ ರೈಲು ಬೇಕು ಎಂದು ಕದಲದೆ ಅಲ್ಲಿಯೇ ನಿಂತಿದ್ದರು ಎಂದು ಪೊಲೀಸರು ಹೇಳಿದರು.