ರೈಲ್ವೇ ನಿಲ್ಧಾಣದಲ್ಲಿ‌ ಪತಿಗೆ ಹೃದಯಾಘಾತ; ಕಂಗಾಲಾಗದೆ ಉಸಿರು ತುಂಬಿ ಪ್ರಾಣ ರಕ್ಷಿಸಿದ ಪತ್ನಿ!

ಮಥುರಾ;ಮಥುರಾ ರೈಲ್ವೆ ನಿಲ್ದಾಣದಲ್ಲಿ​ ಹೃದಯಾಘಾತಕ್ಕೆ ಒಳಗಾದ ಪತಿಗೆ ಪತ್ನಿ ಸಮಯ ಪ್ರಜ್ಞೆಯಿಂದ ಮರು ಜೀವ ಕೊಟ್ಟ ಘಟನೆ‌ ನಡೆದಿದೆ.

ನಿನ್ನೆ ಬೆಳಗ್ಗೆ ಮಥುರಾ ಜಂಕ್ಷನ್‌ನಲ್ಲಿ 70 ವರ್ಷದ ಕೇಶವನ್ ಎಂಬುವವರಿಗೆ ಹೃದಯಾಘಾತವಾಗಿತ್ತು.ಆಗ ಜೊತೆಗಿದ್ದ ಪತ್ನಿ ದಯಾ ಬುದ್ದಿ ಬಳಸಿ ಸುಮಾರು 10 ನಿಮಿಷಗಳ ಕಾಲ ತನ್ನ ಬಾಯಿಯ ಮೂಲಕ ಪತಿಗೆ ಉಸಿರಾಟ ತುಂಬಿದ್ದಾರೆ.

ಇದರಿಂದಾಗಿ ಗಂಡನ ಹೃದಯ ಬಡಿತ ಮತ್ತು ಉಸಿರಾಟವು ಮುಂದುವರೆದಿದೆ.ಇದೇ ವೇಳೆ ರೈಲ್ವೆ ನಿಲ್ದಾಣದಲ್ಲಿ ಆರ್‌ಪಿಎಫ್ ಸಿಬ್ಬಂದಿ ಕೂಡ ನೆರವಿಗೆ ಬಂದಿದ್ದಾರೆ. ಆರ್‌ಪಿಎಫ್ ಸಿಬ್ಬಂದಿ ಅವರ ಕೈ ಕಾಲುಗಳಿಗೆ ಮಸಾಜ್ ಮಾಡುತ್ತಲೇ ಇದ್ದರು.ಇದರಿಂದಾಗಿ ಕೇಶವನ್ ಅವರ ಪ್ರಾಣ ರಕ್ಷಣೆಯಾಗಿದೆ‌.

ಕೇಶವನ್ ಅವರಿಗೆ ಪ್ರಜ್ಞೆ ಬಂದ ತಕ್ಷಣ ಆರ್‌ಪಿಎಫ್ ಸಿಬ್ಬಂದಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಟಾಪ್ ನ್ಯೂಸ್