ಉಪ್ಪಳ; ರೈಲು ಢಿಕ್ಕಿ ಹೊಡೆದು ಪೊಲೀಸ್ ವಾಹನ ಚಾಲಕ ಮೃತ್ಯು

ಉಪ್ಪಳ;ಕರಾವಳಿ ಪೊಲೀಸ್ ಠಾಣೆಯ ವಾಹನ ಚಾಲಕ ಮೃತಪಟ್ಟ ಘಟನೆ ಉಪ್ಪಳದಲ್ಲಿ ನಡೆದಿದೆ.

ಕುಂಬಳೆ ಕರಾವಳಿ ಪೊಲೀಸ್ ಠಾಣೆಯ ಚಾಲಕ ಉಣ್ಣಿ ಕೃಷ್ಣನ್(28) ಮೃತಪಟ್ಟವರು.

ಉಣ್ಣಿ ಕೃಷ್ಣನ್ ಉಪ್ಪಳ ರೈಲು ನಿಲ್ದಾಣದಲ್ಲಿ ಇಳಿದು ತಾನು ಕೆಲಸ ಮಾಡುತ್ತಿದ್ದ ಪೊಲೀಸ್ ಠಾಣೆಗೆ ತೆರಳಿ ರೈಲು ಹಳಿ ಮೂಲಕ ನಡೆದುಕೊಂಡು ಹೋಗುತ್ತಿದ್ದಾಗ ಮಂಗಳೂರು ಕಡೆಯಿಂದ ಬರುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ‌.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಉಣ್ಣಿ ಕೃಷ್ಣನ್ ಗೆ
ಉಪ್ಪಳದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಈ ಕುರಿತು ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್