ಈಜಿಪ್ಟ್ ನಲ್ಲಿ ನಡೆದ ವಿಶ್ವ ಕುರಾನ್ ಪಠಣ ಸ್ಪರ್ಧೆಯಲ್ಲಿ ಭಾರತದಿಂದ ಭಾಗವಹಿಸಿದ್ದ ಕರಿ ಮಂಜೂರ್ ಅಹ್ಮದ್
ನಾಲ್ಕನೇ ಸ್ಥಾನ ಗಳಿಸಿದ್ದಾರೆ.
ಅಸ್ಸಾಂನ ಕರಿಂಗಂಜ್ ಮೂಲದ ಕರಿ ಮಂಜೂರ್ ಅಹ್ಮದ್ (26)ಇದಕ್ಕೂ ಮುನ್ನ ಟರ್ಕಿ ಮತ್ತು ಮಲೇಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಐದು ಮತ್ತು ಒಂಬತ್ತನೇ ಸ್ಥಾನ ಪಡೆದಿದ್ದರು.
ಈಜಿಪ್ಟ್ ಸರ್ಕಾರ ಆಯೋಜಿಸಿದ್ದ ಸ್ಪರ್ಧೆಯಲ್ಲಿ 65 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಮಂಜೂರ್ ಅಹ್ಮದ್ ಭಾರತದ ಏಕೈಕ ಸ್ಪರ್ಧಿಯಾಗಿದ್ದರು. ಸ್ಪರ್ಧೆಯು ಮೂರು ಹಂತಗಳಲ್ಲಿ ನಡೆದಿದೆ.
ಇಸ್ಲಾಮಿಕ್ ಶಿಕ್ಷಣದ ವಿಶ್ವದ ಪಾರಂಪರಿಕ ಕೇಂದ್ರಗಳಲ್ಲಿ ಒಂದಾದ ಅಲ್-ಅಝರ್ ವಿಶ್ವವಿದ್ಯಾನಿಲಯದ ಬಾಂಗ್ಲಾದೇಶ ಶಾಖೆಯಿಂದ ಮಂಜುರ್ ಅಹ್ಮದ್ ಡಿಪ್ಲೊಮಾ ಕೋರ್ಸ್ ಮುಗಿಸಿದ್ದಾರೆ.
ಸ್ಪರ್ಧೆಯಲ್ಲಿ ದೇಶದ 133 ಕೋಟಿ ಜನರನ್ನು ಪ್ರತಿನಿಧಿಸಿದ್ದು ಹೆಮ್ಮೆಯ ಸಂಗತಿ ಎಂದು ಇದೇ ವೇಳೆ ಮಂಜೂರ್ ಹೇಳಿದರು.