ಕಾಸರಗೋಡು:ಕಳೆದ 25 ದಿನಗಳಿಂದ ಕತಾರ್ ನ ದೋಹಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಸರಗೋಡು ತಳಂಗರೆಯ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ತಳಂಗರೆಯ ಹಸೀಬ್ (33) ಮೃತರು.ಇವರು ದೋಹಾದಲ್ಲಿ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದರು. ಕೆಎಂಸಿಸಿಯಾ ಸಕ್ರಿಯ ಸದಸ್ಯರಾಗಿದ್ದರು.
25 ದಿನಗಳ ಹಿಂದೆ ರಾತ್ರಿ ಆಹಾರ ಸೇವಿಸಿದ ಬಳಿಕ ಹಸೀಬ್ ಕುಸಿದು ಬಿದ್ದಿದ್ದರು.ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು
ಅವರಿಗೆ ಮೆದುಳಿನ ಸಮಸ್ಯೆ ಜೊತೆಗೆ ಹೃದಯಾಘಾತವಾಗಿದೆ.ಕಳೆದ 25 ದಿನಗಳಿಂದ ವೆಂಟಿಲೇಟರ್ ಸಹಾಯದಲ್ಲಿದ್ದ ಹಸೀಬ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮೃತದೇಹವನ್ನು ಗುರುವಾರ ಕಾಸರಗೋಡಿಗೆ ತರಲಾಗಿದ್ದು, ಮಾಲಿಕ್ ದಿನಾರ್ ಮಸೀದಿಯಲ್ಲಿ ದಫನ ಮಾಡಲಾಯಿತು .
ಮೃತ ಹಸೀಬ್ ಪತ್ನಿ & ಮಕ್ಕಳನ್ನು ಅಗಲಿದ್ದಾರೆ.