ಕತಾರ್; ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡಿದ್ದ ಎಂಟು ಮಾಜಿ ಅಧಿಕಾರಿಗಳು ಕತಾರ್ ನಲ್ಲಿ ಸಂಭಾವ್ಯ ಮರಣದಂಡನೆಯನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ನವತೇಜ್ ಸಿಂಗ್ ಗಿಲ್, ಕಮಾಂಡರ್ ಬೀರೇಂದ್ರ ಕುಮಾರ್ ವರ್ಮಾ, ಕಮಾಂಡರ್ ಸುಗುಣಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತಾ, ಕಮಾಂಡರ್ ಅಮಿತ್ ನಾಗ್ಪಾಲ್, ಕ್ಯಾಪ್ಟನ್ ಸೌರಬ್ ವಸಿಷ್ಟ್ ಮತ್ತು ಕ್ಯಾಪ್ಟನ್ ರಾಜೇಶ್ ಗೋಪಕುಮಾರ್ ಕತಾರ್ ನಲ್ಲಿ ಬೇಹುಗಾರಿಕೆ ಆರೋಪದಲ್ಲಿ ಬಂಧನದಲ್ಲಿದ್ದಾರೆ.
ಭಾರತೀಯ ನೌಕಾಪಡೆಯ ಈ ಎಂಟು ಮಾಜಿ ಸಿಬ್ಬಂದಿಗಳು ಇಸ್ರೇಲ್ಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪವನ್ನು ಹೊತ್ತಿದ್ದಾರೆ. ಈ ಕುರಿತ ಸಾಕ್ಷ್ಯಾಧಾರಗಳು ಕತರ್ ಅಧಿಕಾರಿಗಳ ಬಳಿಯಲ್ಲಿವೆ ಎನ್ನಲಾಗಿದೆ.
ಕತರ್ ಸರಕಾರವು ಈ ವಿಷಯದಲ್ಲಿ ಪಟ್ಟು ಸಡಿಲಿಸುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ ಎಂದು ಭಾರತಿಯ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ. ಪಾಕಿಸ್ತಾನದ ಗುಪ್ತಚರ ಏಜೆನ್ಸಿಗಳು ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳನ್ನು ಪ್ರಕರಣದಲ್ಲಿ ಸಿಲುಕಿಸಿರುವ ಸಾಧ್ಯತೆಯಿದೆ ಎಂದು ಹೇಳಿದೆ.
ಇವರ ಬಿಡುಗಡೆಗಾಗಿ ಕತರ್ ಜೊತೆ ಉನ್ನತ ಮಟ್ಟದ ಮಾತುಕತೆಗಳ ಕುರಿತು ಭಾರತದ ಕಡೆಯಿಂದ ನಡೆದಿಲ್ಲ ಎಂದು ವರದಿಯಾಗಿದೆ.
ಕತರ್ ನ ಅಧಿಕಾರಿಗಳೊಂದಿಗೆ ನಾವು ಮಾತುಕತೆ ನಡೆಸುತ್ತಿದ್ದೇವೆ.ದೋಹಾದಲ್ಲಿನ ನಮ್ಮ ರಾಯಭಾರ ಕಚೇರಿಯು ಆರೋಪಿ ಭಾರತೀಯರ ಕುಟುಂಬಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿರುವ ಬಗ್ಗೆ ವರದಿಯಾಗಿದೆ.