ಪುತ್ತೂರು; ಬಸನಗೌಡ ಯತ್ನಾಳ್ ಜೊತೆ ಗಾಯಾಳುಗಳ ಕೊಠಡಿಗೆ ಪ್ರವೇಶಿಸಿದ ಬಿಜೆಪಿ ಮುಖಂಡನಿಗೆ ಹೊರದಬ್ಬಿದ ಪುತ್ತಿಲ ಬೆಂಬಲಿಗರು; ವಿಡಿಯೋ ವೈರಲ್

ಪುತ್ತೂರು;ಬ್ಯಾನರ್ ನಲ್ಲಿ ಶ್ರದ್ಧಾಂಜಲಿ ಕೋರಿಕೆ ಆರೋಪದಲ್ಲಿ ಬಂಧಿತ ಆರೋಪಿಗಳಿಗೆ ಪೊಲೀಸ್ ದೌರ್ಜನ್ಯ ಆರೋಪಿಸಿ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ಮಾಡಿದ್ದಾರೆ.ಈ ವೇಳೆ ಪುತ್ತಿಲ ಬೆಂಬಲಿಗರು ಆಸ್ಪತ್ರೆ ಕೊಠಡಿಯಿಂದ ಬಿಜೆಪಿ ಮುಖಂಡರೋರ್ವರನ್ನು ಹೊರದಬ್ಬಿದ ಘಟನೆ ನಡೆದಿದೆ.

ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ.ಯತ್ನಾಳ್ ಜೊತೆ ಆಸ್ಪತ್ರೆಯ ಕೊಠಡಿಗೆ ಬಂದ ಬಿಜೆಪಿ ಮುಖಂಡ ಅಜಿತ್ ರೈಯನ್ನು ಪುತ್ತಿಲ ಬೆಂಬಲಿಗರು ಆಸ್ಪತ್ರೆಯ ಕೊಠಡಿಯಿಂದ ಹೊರ ದಬ್ಬಿದ್ದಾರೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು
ಅರುಣ್ ಕುಮಾರ್ ಪುತ್ತಿಲ ಅವರು ಆಸ್ಪತ್ರೆಯ‌ ಕೊಠಡಿಯ ಕರೆದುಕೊಂಡು ಹೋಗಿದ್ದಾರೆ.ಈ ವೇಳೆ ಯತ್ನಾಳ್ ಹಿಂದೆಯಿಂದ ಬಂದಿದ್ದ ಅಜಿತ್ ರೈ ಗಾಯಾಳುಗಳಿದ್ದ ಕೊಠಡಿಗೆ ಪ್ರವೇಶಿಸಿದ್ದಾರೆ.ಈ ವೇಳೆ ಪುತ್ತಿಲ ಬೆಂಬಲಿಗರು ಅವರನ್ನು ದೂಡಿ ಹೊರದಬ್ಬಿದ್ದಾರೆ.

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಹಂಚಿಕೆ ಬಳಿಕ ಬಿಜೆಪಿಯೊಳಗೆ ಅಸಮಾಧಾನ ಸ್ಪೋಟಗೊಂಡಿತ್ತು.ಚುನಾವಣಾ ಫಲಿತಾಂಶದ ಬಳಿಕ ನಳಿನ್ ಕುಮಾರ್ ಕಟೀಲು ಮತ್ತು ಡಿ.ವಿ.ಸದಾನಂದ ಗೌಡರ ಫೋಟೊಗಳಿರುವ ಬ್ಯಾನರ್ ಹಾಕಿ ಶ್ರದ್ದಾಂಜಲಿ ಕೋರಿ ಬ್ಯಾನರ್ ಚಪ್ಪಲಿ ಹಾರ ಹಾಕಲಾಗಿತ್ತು.ಪ್ರಕರಣಕ್ಕೆ ಸಂಬಂಧಿಸಿ 9 ಮಂದಿಯ ಬಂಧನ ಕೂಡ ನಡೆದಿತ್ತು.

ಬಂಧಿತರ ಮೇಲೆ ಪೊಲೀಸ್ ದೌರ್ಜನ್ಯ ನಡೆದಿರುವುದಾಗಿ ಆರೋಪಿಸಲಾಗಿತ್ತು.ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಪಿಎಸ್ಸೈ ಶ್ರೀನಾಥ್ ರೆಡ್ಡಿ ಹಾಗೂ ಓರ್ವ ಪಿಸಿ ಗೆ ಅಮಾನತು ಮಾಡಲಾಗಿದೆ.ಡಿವೈಎಸ್ಪಿ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸಲಾಗಿದೆ.

ಟಾಪ್ ನ್ಯೂಸ್

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ; ಮಕ್ಕಳು ಆಟವಾಡುವಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ

ನವದೆಹಲಿ; ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿರುವ ಶಾಕಿಂಗ್ ಘಟನೆ ರಾಷ್ಟ್ರ

Developed by eAppsi.com