ಸೌದಿ ಅರೇಬಿಯಾ;ಪುತ್ತೂರಿನ ವ್ಯಕ್ತಿ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಪರ್ಲಡ್ಕ ನಿವಾಸಿ ಅಬ್ದಲ್ಲಾ ಹಾಜಿ ಅವರ ಪುತ್ರ ಹಾರಿಸ್ ದರ್ಬೆ( 43) ಮೃತರು.ಇವರು ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಉದ್ಯಮಿಯಾಗಿದ್ದರು.
ಹಲವಾರು ಸಂಘಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದ ಹಾರಿಸ್ ಅವರು ಸಮಾಜ ಸೇವಕರಾಗಿ ಕೂಡ ಕೆಲಸ ಮಾಡುತ್ತಿದ್ದರು.ಹಾರಿಸ್ ಹಲವು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು.ಕುಂಬ್ರದ ಕರ್ನಾಟಕ ಇಸ್ಲಾಮಿಕ್ ಅಕಾಡಮಿ ಇದರ ಸೌದಿ ವಿಭಾಗದಲ್ಲಿ ಸಕ್ರಿಯ ನೇತೃತ್ವ ವಹಿಸಿದ್ದರು ಎನ್ನಲಾಗಿದೆ.
ನಿನ್ನೆ ಜುಬೈಲ್ ನಲ್ಲಿ ಮೃತಪಟ್ಟಿದ್ದು, ಸುದ್ದಿ ತುಳಿದು ಕುಟುಂಬಸ್ಥರಲ್ಲಿ ಶೋಕ ಮುಡುಗಟ್ಡಿದೆ.ಮೃತರು ತಂದೆ- ತಾಯಿ,ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.