ಪುತ್ತೂರು; ಯುವಕನ ಮೇಲೆ ಹಲ್ಲೆ, ದೂರು ದಾಖಲು

ಪುತ್ತೂರು:ಯುವಕನೋರ್ವನ ಮೇಲೆ ಹಲ್ಲೆ ನಡೆದಿರುವ ಘಟನೆ ಪುತ್ತೂರು ತಾಲೂಕಿನ ಪುರುಷಕಟ್ಟೆಯಲ್ಲಿ ನಡೆದಿದೆ.

ನರಿಮೊಗರು ನಿವಾಸಿ ಪ್ರವೀಣ್ ಆಚಾರ್ಯ ಎಂಬವರಿಗೆ ಹಲ್ಲೆ ನಡೆಸಲಾಗಿದೆ.

ಪುರುಷರಕಟ್ಟೆ ಸಮೀಪದ ಇಂದ್ರನಗರ ರಕ್ತೇಶ್ವರಿಕಟ್ಟೆ ನಿವಾಸಿ ಪ್ರವೀಣ್ ಎಂಬಾತ ಹಲ್ಲೆ ನಡೆಸಿದ್ದಾನೆ. ಬಳಿಕ ಮನೆಗೆ ನುಗ್ಗಿ ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.

ಹಲ್ಲೆಗೊಳಗಾದ ಪ್ರವೀಣ್ ಕಳೆದ ಕೆಲ ತಿಂಗಳ ಹಿಂದೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ. ಪ್ರವೀಣ್ ಚುನಾವಣೆ ವೇಳೆ ಪುತ್ತೂರಿನ‌ ಹಾಲಿ ಶಾಸಕರ ಪರ ಪ್ರಚಾರ ಮಾಡಿದ್ದರು ಎನ್ನಲಾಗಿದೆ.ಪುರುಷರಕಟ್ಟೆ ಭಾಗದಲ್ಲಿ ಕೆಲ ಬಿಜೆಪಿ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಎನ್ನಲಾಗಿದೆ.ಇದೇ ವಿಚಾರಕ್ಕೆ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.

ಹಲ್ಲೆಗೊಳಗದ ಪ್ರವೀಣ್ ಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಟಾಪ್ ನ್ಯೂಸ್