ಪುತ್ತೂರು; ಸಹಪಾಠಿ ಜೊತೆ ಮಾತನಾಡಿದ್ದನ್ನು ನೆಪವಾಗಿಸಿ ಯುವಕನ ಮೇಲೆ ಹಲ್ಲೆ ಪ್ರಕರಣ, ನಾಲ್ವರ ಬಂಧನ

ಪುತ್ತೂರು:ಸಹಪಾಠಿ ವಿದ್ಯಾರ್ಥಿನಿ ಜೊತೆ ಮಾತನಾಡಿದ ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ‌.

ದಿನೇಶ್ ಗೌಡ (25) ಪ್ರಜ್ವಲ್ (23) ನಿಶಾಂತ್ ಕುಮಾರ್ (19) ಮತ್ತು ಪ್ರದೀಪ್ (19) ಬಂಧಿತ ಆರೋಪಿಗಳು ಎನ್ನಲಾಗಿದೆ.

ಪರ್ಲಡ್ಕ ಗೋಲಿಕಟ್ಟೆ ನಿವಾಸಿ ಮಹಮ್ಮದ್ ಫಾರಿಸ್ (20) ಎಂಬ ಯುವಕನಿಗೆ ಸಹಪಾಠಿ ವಿದ್ಯಾರ್ಥಿನಿ ಜೊತೆ ಮಾತನಾಡಿದ್ದಕ್ಕೆ ರೂಂ ಒಂದರಲ್ಲಿ ಕೂಡಿಹಾಕಿ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಂತ್ರಸ್ತ ಫಾರಿಸ್ ಗೆ ಚಿಕಿತ್ಸೆ ನೀಡಲಾಗಿದ್ದು, ಈ ಕುರಿತು ಪುತ್ತೂರು ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೊಹಮ್ಮದ್‌ ಪಾರಿಶ್‌,
ನನ್ನ ಕ್ಲಾಸ್‌ಮೇಟ್‌ ಮತ್ತು ನಾನು ಇಬ್ಬರೂ ಅಂಗಡಿಯಲ್ಲಿ ಜ್ಯೂಸ್‌ ಕುಡಿಯುತ್ತಿದ್ದೆವು. ಇದಾದ ಬಳಿಕ 15 ಜನ ನನ್ನನ್ನು ಕರೆದರು. ನಾನು ಹೆಸರು ಹೇಳಿದ ಬಳಿಕ ನಿನ್ನಲ್ಲಿ ಮಾತನಾಡಲಿದೆ ಎಂದು ನನ್ನನ್ನು ರೂಂ ಒಂದಕ್ಕೆ ಕರೆದೊಯ್ದರು. ಅಲ್ಲಿ ಸುಮಾರು 50 ಮಂದಿ ಸೇರಿಕೊಂಡು ನನ್ನ ಮೇಲೆ ವೈರ್ ಮತ್ತು ಲಾಠಿಯಿಂದ ಹೊಡೆದರು. ಕಬ್ಬಿಣ ಬಿಸಿ ಮಾಡಿ ಮೈಮೇಲಿಟ್ಟು ಹಲ್ಲೆ ನಡೆಸಿದರು, ಬಳಿಕ ನೀನು ಪೊಲೀಸರಿಗೆ ದೂರು ನೀಡಿದರೆ ನಿನ್ನನ್ನು ಕೊಲೆ ಮಾಡುತ್ತೇವೆ. ನಿನ್ನ ಮೇಲೆ ಪೋಕ್ಸೋ ಕಾಯ್ದೆ ದಾಖಲಾಗುವಂತೆ ಮಾಡುತ್ತೇವೆ ಎಂದು ಹೆದರಿಸಿದರು ಎಂದು ಗಾಯಾಳು ಫಾರಿಸ್ ತಿಳಿಸಿದ್ದಾರೆ.

ಈ ಕುರಿತು ಪುತ್ತೂರು ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಮುಸ್ಲಿಂ ಮುಖಂಡರು ಆಗ್ರಹಿಸಿದ್ದರು.

ಟಾಪ್ ನ್ಯೂಸ್

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ; ಮಕ್ಕಳು ಆಟವಾಡುವಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ

ನವದೆಹಲಿ; ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿರುವ ಶಾಕಿಂಗ್ ಘಟನೆ ರಾಷ್ಟ್ರ

Developed by eAppsi.com