ಪುತ್ತೂರು; ಆಸ್ಪತ್ರೆಯಲ್ಲಿ ಹಾಕಿದ್ದ ವಿವಾದಾತ್ಮಕ ಸೂಚನಾ ಫಲಕ ತೆರವು

ಪುತ್ತೂರು: ಪುತ್ತೂರು ತಾಲೂಕು ಆಸ್ಪತ್ರೆಯಲ್ಲಿದ್ದ ಬುರ್ಖಾ ತೆಗೆದು ಒಳಗೆ ಬನ್ನಿ ಎಂಬ ಸೂಚನಾ ಫಲಕವನ್ನು ತೆರವುಗೊಳಿಸಲಾಗಿದೆ

ಕಳೆದ ಕೆಲವು ದಿನಗಳ ಹಿಂದೆ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ರೋಗಿಗಳ ರೂಮ್ ಬಾಗಿಲಿನಲ್ಲಿ ಈ ಘಲಕವನ್ನು ನೇತು ಹಾಕಲಾಗಿತ್ತು.ಆದರೆ ಯಾರೋ ಒಬ್ಬರು ಈ ಸೂಚನ ಫಲಕದ ಪೋಟೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.

ಪೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ, ಸೂಚನಾ ಫಲಕವನ್ನು ತೆರವುಗೊಳಿಸಬೇಕೆಂಬ ಆಗ್ರಹ ಕೇಳಿ ಬಂದಿತ್ತು. ಈ ನಿಟ್ಟಿನಲ್ಲಿ ಇದೀಗ ಸೂಚನಾ ಫಲಕವನ್ನು ತೆಗೆದು ಹಾಕಲಾಗಿದೆ

ಟಾಪ್ ನ್ಯೂಸ್