ಪುತ್ತೂರು; ಸರಕಾರಿ ಕಚೇರಿಗಳ ನಕಲಿ ಸೀಲ್ ಗಳು ಅಂಗಡಿಯೊಂದರಲ್ಲಿ ಪತ್ತೆ

ಪುತ್ತೂರು:ವಿವಿಧ ಸರ್ಕಾರಿ ಕಚೇರಿಗಳ ನಕಲಿ ಸೀಲ್ ಬಳಸಿ ನಕಲಿ ದಾಖಲೆ ತಯಾರಿಸುತ್ತಿದ್ದ ಜಾಲವನ್ನು ಪುತ್ತೂರಿನಲ್ಲಿ ಅಧಿಕಾರಿಗಳು ಭೇದಿಸಿದ್ದಾರೆ.

ಪುತ್ತೂರಿನ ಪಡೀಲ್ ಬಳಿ ಕಾರ್ಯಾಚರಿಸುತ್ತಿದ್ದ ವಿಶ್ವನಾಥ್ ಎಂಬವರಿಗೆ ಸೇರಿದ ಬಿ.ಬಿ ಇಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್ ಸೆಂಟರಿನಲ್ಲಿ ಅಕ್ರಮ ಜಾಲವನ್ನು ಪತ್ತೆ ಹಚ್ಚಲಾಗಿದೆ.

ವಿದ್ಯುತ್ ಗುತ್ತಿಗೆ ಕಾಮಗಾರಿ ನಿರ್ವಹಿಸುತ್ತಿದ್ದ ಈ ಅಂಗಡಿಯಲ್ಲಿ, ಪುತ್ತೂರು ನಗರಸಭೆ, ಕಡಬ ತಾಲೂಕು ಪಂಚಾಯತ್ ಹಾಗೂ ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತಿಗಳ ಸೀಲ್ ಗಳನ್ನೇ ಹೋಲುವ ನಕಲಿ ಸೀಲ್ ಗಳು‌ ಪತ್ತೆಯಾಗಿವೆ.

ದಾಖಲೆ ಪತ್ರಗಳಿಗೆ ಫೋರ್ಜರಿ ಸಹಿ‌ ಹಾಕಿ, ಅದಕ್ಕೆ ನಕಲಿ ಸೀಲ್ ಗಳನ್ನು ಹಾಕಲಾಗುತ್ತಿತ್ತು ಎನ್ನುವುದು ಬಯಲಾಗಿದೆ.

ಸಾರ್ವಜನಿಕ ದೂರಿನ‌ ಮೇರೆಗೆ ತಾಪಂ ಇಓ ನವೀನ್ ಭಂಡಾರಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, ಪರಿಶೀಲಿಸಿದಾಗ ವಂಚನೆ ಜಾಲ ಬಯಲಾಗಿದೆ.

ಟಾಪ್ ನ್ಯೂಸ್