ಪುತ್ತೂರಿನ ಯುವಕ ಪಯ್ಯನೂರಿನಲ್ಲಿ ಮೃತ್ಯು

ಪುತ್ತೂರು:ಪುತ್ತೂರು ನಿವಾಸಿ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವಯನಾಡ್ ನಲ್ಲಿ ನಡೆದಿದೆ.

ಪುತ್ತೂರು ಸಮೀಪದ ಹಿರೇಬಂಡಾಡಿ ಅಡೆಕ್ಕಲ್ ನಿವಾಸಿ ಅಝೀಂ(20) ಮೃತ ಯುವಕ ಎಂದು ತಿಳಿದು ಬಂದಿದೆ.

ಅಝೀಂ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ನಿನ್ನೆ ರಾತ್ರಿ ಸ್ನೇಹಿತರ ಜೊತೆ ಸೇರಿಕೊಂಡು ವಯನಾಡ್ ಗೆ ಪ್ರವಾಸಕ್ಕೆ ತೆರಳಿದ್ದರು.

ಇಂದು ಬೆಳಿಗ್ಗೆ ಪಯ್ಯನೂರು ಸಮೀಪ ಕೆರೆಯಲ್ಲಿ ಸ್ನಾನ ಮಾಡಲು ಇಳಿದಿದ್ದು, ಈ ವೇಳೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಟಾಪ್ ನ್ಯೂಸ್