ಪುತ್ತೂರು; ಹರಿವೆ ಸೊಪ್ಪಿನ‌ ಪದಾರ್ಥ ಸೇವಿಸಿದ ಬಳಿಕ ಮೂವರು ಅಸ್ವಸ್ಥ, ಮಂಗಳೂರಿನ‌ ಆಸ್ಪತ್ರೆಗೆ ದಾಖಲು

ಪುತ್ತೂರು; ಹರಿವೆ ಸೊಪ್ಪಿನ ಪದಾರ್ಥ ಸೇವಿಸಿ ಮೂವರು ಅಸ್ವಸ್ಥಗೊಂಡ ಘಟನೆ ಬೆಳ್ಳಿಪ್ಪಾಡಿ ಗ್ರಾಮದ ಕೈಲಾಜೆ ಎಂಬಲ್ಲಿ ನಡೆದಿದೆ.

ಬೆಳ್ಳಿಪ್ಪಾಡಿಯ ಕೈಲಾಜೆ ಕೊರಗಪ್ಪ ಗೌಡ ಹಾಗೂ ಅವರ ಪತ್ನಿ ಲಲಿತಾ ಹಾಗೂ ಮನೆಗೆ ಬಂದಿದ್ದ ರಮೇಶ ಅಡ್ಕರಗುರಿ ಆಸ್ಪತ್ರೆಗೆ ದಾಖಲಾದವರು.

ಕೈಲಾಜೆ ಕೊರಗಪ್ಪ ಗೌಡ ಮನೆಯಲ್ಲಿ ಮಧ್ಯಾಹ್ನದ ಊಟಕ್ಕೆ ತಮ್ಮ ಮನೆಯಲ್ಲಿಯೇ ಬೆಳೆದ ಹರಿವೆಯ ಪದಾರ್ಥ ಮಾಡಿದ್ದರು. ಎಂದಿನಂತೆ ಮಧ್ಯಾಹ್ನ ಊಟ ಸೇವಿಸಿದ್ದವರು. ಸಂಜೆಯಾಗುತ್ತಲೇ ಪದಾರ್ಥ ಸೇವಿಸಿದ್ದ ಮೂವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ತೀವ್ರವಾಗಿ ಆಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.

ಬಳಿಕ ಮೂವರನ್ನು ಕೂಡ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ನನಗೆ ಸಾವು ಬರಲಿ-ಬ್ರಿಜ್‌ ಭೂಷಣ್‌ ಸಿಂಗ್‌

ನವದೆಹಲಿ;ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಶನ್‌ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್‌ ಭೂಷಣ್‌ ಸಿಂಗ್‌ ತನ್ನ ಮೇಲಿನ‌ ಆರೋಪ ತಳ್ಳಿ ಹಾಕಿದ್ದಾರೆ‌.

ಕುಸ್ತಿ ಪಟುಗಳು ಭೂಷಣ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿ ಬ್ರಿಜ್​ ಭೂಷಣ್‌, ಇಂತಹ ಜೀವನ ನಡೆಸುವುದಕ್ಕಿಂತ ಸಾವು ಬರಲಿ. ನಾನು ಅಸಹಾಯಕ ಎಂಬ ಭಾವನೆ ಬಂದ ದಿನದಂದು ಸಾವಿಗೆ ಶರಣಾಗುತ್ತೇನೆ ಎಂದು ಹೇಳಿದ್ದಾರೆ.

ಸ್ನೇಹಿತರೇ, ನಾನು ಏನು ಪಡೆದಿದ್ದೇನೆ ಹಾಗೂ ಏನು ಕಳೆದುಕೊಂಡಿದ್ದೇನೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ದಿನ ಮತ್ತು ಹೋರಾಟಕ್ಕೆ ನನ್ನಲ್ಲಿ ಶಕ್ತಿ ಇಲ್ಲ ಎಂದು ಭಾವಿಸಿದ ದಿನ ನನಗೆ ಅಂಥಹ ಜೀವನ ನಡೆಸಬೇಕಾಗಿಲ್ಲ.
ನಾನು ಸಾವಿಗೆ ಶರಣಾಗುತ್ತೇನೆ. ಅಂಥ ಜೀವನ ನಡೆಸುವ ಬದಲು ಸಾವೇ ನನ್ನನ್ನು ಕರೆದೊಯ್ಯಲಿ ಎಂದು ಬಯಸುತ್ತೇನೆ ಎಂದು ವಿಡಿಯೋದಲ್ಲಿ ಬ್ರಿಜ್ ಭೂಷಣ್ ಹೇಳಿದ್ದಾರೆ

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com