ಪುತ್ತೂರು;ಪುತ್ತೂರಿನಲ್ಲಿ ಬಿಜೆಪಿ ಜೊತೆಗಿನ ಅರುಣ್ ಕುಮಾರ್ ಪುತ್ತಿಲ ಅವರ ಪೈಟ್ ಮುಂದುವರಿದಿದೆ.
ಅರುಣ್ ಪುತ್ತಿಲ ಹೊಸ ಸಂಘಟನೆ ಘೋಷಣೆ ಮಾಡಿದ್ದಾರೆ.
ಹಿಂದುತ್ವದ ಹೆಸರಲ್ಲೇ ಸಂಘಟನೆ ಕಟ್ಟಿ ಬಿಜೆಪಿಗೆ ಮತ್ತೆ ಸವಾಲು ಹಾಕಿರುವ ಪುತ್ತಿಲ, ಹಿಂದುತ್ವದ ಶಕ್ತಿಕೇಂದ್ರದಲ್ಲೇ ಹೊಸ ಸಂಘಟನೆ ಸ್ಥಾಪಿಸಿದ್ದಾರೆ.
ಪುತ್ತೂರಿನಲ್ಲಿ ನಡೆದ ಸೇವಾ ಸಮರ್ಪಣಾ ಸಮಾವೇಶದಲ್ಲಿ ಅಧಿಕೃತವಾಗಿ ‘ಪುತ್ತಿಲ ಪರಿವಾರ’ ಸಂಘಟನೆ ಘೋಷಣೆ ಮಾಡಲಾಗಿದೆ.
ಆರ್.ಎಸ್.ಎಸ್ ವಿರುದ್ದವೇ ಅರುಣ್ ಪುತ್ತಿಲ ಅವರ ಈ ನಡೆ ಅಚ್ಚರಿಯನ್ನುಂಟುಮಾಡಿದೆ.ಸಂಘಟನೆಯಲ್ಲಿ ಪರಿವಾರ ಎಂಬ ಹೆಸರೂ ಇರುವುದು ಹಲವರ ಹುಬ್ಬೇರಿಸಿದೆ.
ಸಂಘಪರಿವಾರದ ಹಲವು ಕಾರ್ಯಕರ್ತರು ‘ಪುತ್ತಿಲ ಪರಿವಾರ’ ಪರವಾಗಿ ಪ್ರಚಾರಕ್ಕಿಳಿದಿದ್ದು, ಸಾವಿರಾರು ಕಾರ್ಯಕರ್ತರ ಸಮ್ಮುಖ ‘ಪುತ್ತಿಲ ಪರಿವಾರ’ ಲೋಗೋ ಲೋಕಾರ್ಪಣೆಗೊಳಿಸಲಾಗಿದೆ.
ಲೋಕಸಭಾ ಚುನಾವಣೆಗೆ ಮೊದಲು ನಡೆದ ಈ ಬೆಳವಣಿಗೆ ಬಿಜೆಪಿಗೆ ನುಂಗಲಾರದ ತುತ್ತಾಗುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿದೆ.