ಪುತ್ತಿಲ ಪರಿವಾರದ ಕಚೇರಿ ಮುಂದೆ ತಳವಾರು ಝಳಪಿಸಿದ ಪ್ರಕರಣ; ಮಗನಿಗೆ ರಕ್ಷಣೆ ನೀಡುವಂತೆ ಹೆತ್ತವರು ಪೊಲೀಸರ ಮೊರೆ

ಪುತ್ತೂರು; ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರದ ಕಚೇರಿಯ ಮುಂಭಾಗದಲ್ಲಿ ತಲವಾರು ಪ್ರದರ್ಶಿಸಿ ಮನೀಶ್‌ ಕುಲಾಲ್‌ ಅವರಿಗೆ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ನ.10ರಂದು ಮಧ್ಯಾಹ್ನ ಹಿಂಜಾವೇ ಮುಖಂಡ ಸಹಿತ 9 ಮಂದಿಯ ತಂಡ ತಲವಾರು ಝಳಪಿಸಿದ್ದು ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಆರೋಪಿಗಳಾದ ದಿನೇಶ್‌ ಪಂಜಿಗ, ಭವಿತ್‌, ಮನ್ವಿತ್‌, ಜಯಪ್ರಕಾಶ್‌, ಚರಣ್‌, ಮನೀಶ್‌, ವಿನೀತ್‌ ಹಾಗೂ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರನ್ನು ನ.11ರಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ನ್ಯಾಯಾಧೀಶರು ನ.16ರ ತನಕ ನ್ಯಾಯಾಂಗ ಕಸ್ಟಡಿಗೆ ನೀಡಿದ್ದಾರೆ.

ಪುತ್ತಿಲ ಪರಿವಾರದ ಮನೀಶ್‌ ಕುಲಾಲ್‌ ಅವರ ಹೆತ್ತವರು ಮಗನಿಗೆ ರಕ್ಷಣೆ ನೀಡುವಂತೆ ನಗರ ಪೊಲೀಸ್‌ ಠಾಣೆಗೆ ಮನವಿ ಸಲ್ಲಿಸಿದ್ದಾರೆ.

ತಲವಾರು ಜತೆ ಬಂದಿದ್ದ ತಂಡ ನನ್ನ ಮಗನನ್ನು ಗುರಿಯಾಗಿರಿಸಿಕೊಂಡಿದ್ದಾರೆ.ನನ್ನ ಮಗನಿಗೆ ರಕ್ಷಣೆ ನೀಡುವಂತೆ ಮನೀಶ್‌ ತಂದೆ ಆನಂದ ಕುಲಾಲ್‌ ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಟಾಪ್ ನ್ಯೂಸ್