ಪುತ್ತೂರು;ಹೆರಿಗೆ ವೇಳೆ ಮೃತಪಟ್ಟ ಮಹಿಳೆಯ ಮನೆಗೆ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.
ಶೇಖಮಲೆ ನಿವಾಸಿ ಇಬ್ರಾಹೀಂ ಅವರ ಪತ್ನಿ ಹಸೀನಾ(29) ನಿನ್ನೆ ಹೆರಿಗೆಯ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದರು.ಮಗು ಬದುಕುಳಿದಿತ್ತು.
ಅರುಣ್ ಕುಮಾರ್ ಪುತ್ತಿಲ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ವಾಪಾಸ್ಸು ಬರುವ ವೇಳೆ ಜನ ಸೇರಿರುವುದು ನೋಡಿ ವಿಚಾರಿಸಿ ಮನೆಗೆ ತೆರಳಿದ್ದಾರೆ.
ಬಳಿಕ ಮನೆಯವರಿಗೆ ಸಾಂತ್ವಾನ ಹೇಳಿದ್ದು, ಎಜೆ ಆಸ್ಪತ್ರೆಗೆ ಕರೆ ಮಾಡಿ ಮಗುವಿನ ಆರೋಗ್ಯವನ್ನು ವಿಚಾರಿಸಿದ್ದಾರೆ.