ಮಂಗಳೂರು;ಕುಕ್ಕರ್ ಬ್ಲಾಸ್ಟ್ ಪ್ರಕರಣದ ಸಂತ್ರಸ್ತ ಪುರುಷೋತ್ತಮ ಪೂಜಾರಿಗೆ ಹೊಸ ರಿಕ್ಷಾ, 5 ಲಕ್ಷ ಸಹಾಯಧನ ಹಸ್ತಾಂತರ!

ಮಂಗಳೂರು;ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಗಾಯಾಳು ಆಟೋ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಬಿಜೆಪಿಯಿಂದ ಹೊಸ ಆಟೋ ರಿಕ್ಷಾ, 5 ಲಕ್ಷ ನೆರವನ್ನು ನೀಡಲಾಗಿದೆ.

ಪುರುಷೋತ್ತಮ ಪೂಜಾರಿ ಮನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೊಸ ರಿಕ್ಷಾ, 5 ಲಕ್ಷ ರೂ ಗಳ ಚೆಕ್ ಅನ್ನು ಹಸ್ತಾಂತರಿಸಿದರು.

ಕಳೆದ ನವೆಂಬರ್ ನಲ್ಲಿ ಮಂಗಳೂರಿನ ಪಂಪ್ವೆಲ್ ಬಳಿಯಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟಗೊಂಡಿತ್ತು. ಶಂಕಿತ ಶಾರೀಕ್ ಸೇರಿದಂತೆ ಆಟೋ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಗಾಯಗೊಂಡಿದ್ದರು.ಶಾರಿಕ್ ಎನ್ ಐಎ ವಶದಲ್ಲಿದ್ದಾನೆ.

ಎರಡು ತಿಂಗಳ ಹಿಂದೆ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

ಟಾಪ್ ನ್ಯೂಸ್