ಪುಣೆ;ಸಹೋದರಿಯೊಬ್ಬಳು ತನ್ನ ತಂಗಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಸಂತ್ರಸ್ತೆ ಪೊಲೀಸ್ ಠಾಣೆಗೆ ತೆರಳಿ ಘಟನೆಯನ್ನು ತಿಳಿಸಿದಾಗ ಅಧಿಕಾರಿಗಳು ಕಂಗಾಲಾಗಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಅಕ್ಕನ ವಿರುದ್ಧ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ 18 ವರ್ಷದ ಯುವತಿ ನೀಡಿದ ದೂರಿನ ಆಧಾರದ ಮೇಲೆ 24 ವರ್ಷದ ಅಕ್ಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆರೋಪಿತ 24 ವರ್ಷದ ಯುವತಿ ಮತ್ತು 18 ವರ್ಷದ ಯುವತಿ ಇಬ್ಬರೂ ಸಹೋದರಿಯರು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ವಿಮಾನನಗರ ಪ್ರದೇಶದಲ್ಲಿ ಮನೆಯಲ್ಲಿ ವಾಸಿಸುತ್ತಿದ್ದರು.
ಜನವರಿ 23 ರಂದು ಮನೆಯ ಡ್ರಾಯಿಂಗ್ ರೂಂನಲ್ಲಿ ಮಲಗಿದ್ದ ತಂಗಿಗೆ ಅಕ್ಕ ಕಿರುಕುಳ ನೀಡಿದ್ದಾಳೆ.ಈ ಬಗ್ಗೆ ತಂಗಿ ಪೊಲೀಸ್ ಠಾಣೆಗೆ ಬಂದು ದೂರು ದಾಖಲು ಮಾಡಿದ್ದಾರೆ.