BREAKING ಪಿಯುಸಿ ಫಲಿತಾಂಶ ಪ್ರಕಟ, ಕಲಾ ವಿಭಾಗದಲ್ಲಿ ತಬಸ್ಸುಮ್, ವಾಣಿಜ್ಯ ವಿಭಾಗದಲ್ಲಿ ಅನನ್ಯ ರಾಜ್ಯಕ್ಕೆ ಪ್ರಥಮ, ರಾಜ್ಯಕ್ಕೆ ಯಾವ ಜಿಲ್ಲೆ ಪ್ರಥಮ? ಇಲ್ಲಿದೆ ಮಾಹಿತಿ…

ಬೆಂಗಳೂರು;ನಿರೀಕ್ಷೆಯಂತೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವು ಇದೀಗ ಪ್ರಕಟವಾಗಿದೆ.

ಮೊದಲ ಸ್ಥಾನದಲ್ಲಿ ದಕ್ಷಿಣ ಕನ್ನಡ, ಎರಡನೇ ಸ್ಥಾನ ಉಡುಪಿ, ಮೂರನೇ ಸ್ಥಾನ ಕೊಡಗು, ಕೊನೆಯ ಸ್ಥಾನ ಯಾದಗಿರಿ ಪಡೆದುಕೊಂಡಿದೆ.

ವಾಣಿಜ್ಯದಲ್ಲಿ ಆಳ್ವಸ್ ನ ಅನನ್ಯ ರಾಜ್ಯಕ್ಕೆ ಪ್ರಥಮ, ಕಲಾವಿಭಾಗದಲ್ಲಿ ಬೆಂಗಳೂರು ಕಾಲೇಜಿನ ತಬಾಸ್ಸುಮ್ ರಾಜ್ಯಕ್ಕೆ ಪ್ರಥಮ ಸ್ಥಾನ‌ ಪಡೆದಿದ್ದಾರೆ.ಕೌಶಿಕ್ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ.

2022-23ನೆ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಮಾ.9ರಿಂದ 29ರವರೆಗೆ ನಡೆಸಲಾಗಿತ್ತು.

ಒಟ್ಟು ದ್ವಿತೀಯ ಪಿಯುಸಿಯಲ್ಲಿ 7.27 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. 5,24,209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಫಲಿತಾಂಶವನ್ನು https://karresults.nic.in/ ಎಂದು ಗೂಗಲ್ ನಲ್ಲಿ ಟೈಪ್ ಮಾಡಿ

ಪೇಜ್‌ನಲ್ಲಿ 2nd ಪಿಯುಸಿ ಫಲಿತಾಂಶಕ್ಕೆ ಸಂಬಂಧಸಿದ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.

ಆ ಓಪನ್‌ ಆದ ಪೇಜ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್‌ ನಂಬರ್‌ ಟೈಪ್‌ ಮಾಡಿ.
ನಂತರ ‘Submit’ ಎಂದು ಕ್ಲಿಕ್ ಮಾಡಿ ಫಲಿತಾಂಶ ನೋಡಿ..

ಟಾಪ್ ನ್ಯೂಸ್

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ; ಕರಾವಳಿ ಜಿಲ್ಲೆಗೆ ಚಂಡಮಾರುತದ ಭೀತಿ, ಬಿರುಗಾಳಿ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಉಡುಪಿ;ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಕರವಾಳಿ ಜಿಲ್ಲೆಗಳಿಗೆ ಚಂಡಮಾರುತದ ಭೀತಿ ಎದುರಾಗಿದೆ. ಅರಬ್ಬಿ

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ತಡೆಗೆ “ಆ್ಯಂಟಿ ಕಮ್ಯುನಲ್‌ ವಿಂಗ್” ಸ್ಥಾಪನೆ; ಹೇಗಿರಲಿದೆ ಇದರ ರೂಪುರೇಷೆ? ಗೃಹಸಚಿವರು ಹೇಳಿದ್ದೇನು?

ಮಂಗಳೂರು:ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು

Developed by eAppsi.com