SHOCKING ಗರ್ಭಿಣಿ ಮಹಿಳೆಯ ಹೊಟ್ಟೆ ಮೇಲೆ ಹತ್ತಿ ಕುಳಿತು ಒತ್ತಡ ಹಾಕಿದ ವೈದ್ಯ, ಮಗು ಸಾವು
ಬ್ರೆಜಿಲ್ನಲ್ಲಿ ವೈದ್ಯನೊಬ್ಬ ಮಾಡಿದ ಕಿತಾಪತಿ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.ಮಹಿಳೆಯರೊಬ್ಬರಿಗೆ ಹೆರಿಗೆ ಮಾಡಿಸುವಾಗ ಆಕೆಯ ಹೊಟ್ಟೆಯ ಮೇಲೆ ಕುಳಿತು ಹುಚ್ಚಾಟ ಮಾಡಿದ್ದು,ಕೊನಗೆ ಮಗುವಿನ ಸಾವಿಗೆ ಕಾರಣನಾಗಿದ್ದಾನೆ.
ಮೇ 1ರಂದು ಬ್ರೆಜಿಲ್ ನ ಸಾಂಟಾ ಎಫಿಜೆನಿಯಾದಲ್ಲಿರುವ ಹಾಸ್ಪಿಟಲ್ ದಾಸ್ ಕ್ಲಿನಿಕಾಸ್ UFMG ಎಂಬ ಆಸ್ಪತ್ರೆಗೆ ತುಂಬು ಗರ್ಭಿಣಿ ರಾನಿಲ್ಲಿ ಕೊಯೆಲ್ಹೋ ಸ್ಯಾಂಟೋಸ್ (33) ದಾಖಲಾಗಿದ್ದರು.
ಆಕೆಯನ್ನು ಹೆರಿಗೆಗಾಗಿ ಪ್ರಸೂತಿ ವಿಭಾಗಕ್ಕೆ ಕರೆದುಕೊಂಡು ಹೋದ ವೈದ್ಯ, ಮಹಿಳೆ ನೋವಿನಿಂದ ಚೀರಾಡುವಾಗ ಮಹಿಳೆಯ ಹೊಟ್ಟೆಗೆ ಒತ್ತಡ ಕೊಡುತ್ತಿದ್ದರು. ಮಗು ಸ್ವಲ್ಪ ಹೊರಬಂದಿತ್ತು. ಆದರೆ ಮಗು ಬೇಗ ಹೊರಬರಲಿ ಎಂದು ಗರ್ಭಿಣಿಯ ಹೊಟ್ಟೆಯ ಮೇಲೆ ಹತ್ತಿ ಕುಳಿತಿದ್ದಾನೆ. ಕೈಯಿಂದ ಹಿಡಿದು ನವಜಾತ ಶಿಶುವನ್ನು ಎಳೆದಿದ್ದಾನೆ. ಇವನ ಒತ್ತಡಕ್ಕೆ ಮಗುವಿನ ತಲೆ ಕತ್ತರಿಸಿ ಹೊರ ಬಂದಿದೆ.
ಈ ಬಗ್ಗೆ ಶಿಶುವಿನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ‘ಮಗು ಜನನ ಆಗುವುದನ್ನು ನಾನು ಹತ್ತಿರದಿಂದ ನೋಡುತ್ತಿದ್ದೆ. ಅದು ಹೆಣ್ಣು ಮಗು, ಮೊದಲು ಅದರ ಮುಖ ಸ್ವಲ್ಪವೇ ಹೊರಗೆ ಕಂಡಿತ್ತು. ಅದು ಕಣ್ಣು ಮಿಟುಕಿಸುತ್ತಿತ್ತು.ಅದರ ಬಾಯಿಯಲ್ಲಿ ಚಲನೆ ಇತ್ತು. ವೈದ್ಯ ಅವಸರ ಮಾಡಿದ.ನನ್ನ ಪತ್ನಿಯ ಹೊಟ್ಟೆಯ ಮೇಲೆ ಹತ್ತಿ ಒತ್ತಡ ಕೊಟ್ಟ.ಆಗ ಮಗುವಿನ ತಲೆ ಕತ್ತರಿಸಲ್ಪಟ್ಟಿದೆ ಎಂದು ದೂರು ನೀಡಿದ್ದಾರೆ.
ಮಗು ಹುಟ್ಟುವಾಗಲೇ ಸತ್ತಿತ್ತು ಎಂದು ವೈದ್ಯ ಹೇಳಿದ್ದಾನೆ.ಆದರೆ ತಲೆ ಕತ್ತರಿಸಿದ ಬಗ್ಗೆ ಆತನ ಜೊತೆ ಉತ್ತರ ಇರಲಿಲ್ಲ. ಅದು ಜೀವಂತವಾಗಿತ್ತು ಎಂಬುದಕ್ಕೆ ಸಾಕ್ಷಿಯಿದೆ ಎಂದು ಮಹಿಳೆಯ ಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.