ಆರೆಸ್ಸೆಸ್ ಯೂನಿಫಾರ್ಮ್ ಹಾಕಿ ಲಾಠಿ ಹಿಡಿದು ಫೋಸ್ ಕೊಟ್ಟ ಪ್ರಾಧ್ಯಾಪಕರು!

ಕಲಬುರ್ಗಿ; ಆರ್‌ಎಸ್‌ಎಸ್ ಯೂನಿಫಾರ್ಮ್ ಹಾಕಿ ಲಾಠಿ ಹಿಡಿದು ಮೂವರು ಪ್ರಾಧ್ಯಾಪಕರು ಫೋಸ್ ಕೊಟ್ಟಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.

ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಘಟನೆ ನಡೆದಿದೆ.

ಸಾರ್ವಜನಿಕ ಆಡಳಿತ ವಿಭಾಗದ ಪ್ರಾಧ್ಯಾಪಕರಾದ ಡಾ.ಅಲೋಕ್ ಕುಮಾರ್ ಗೌರವ್‌, ಮನಃಶಾಸ್ತ್ರದ ವಿಭಾಗದ ಡಾ.ವಿಜಯೇಂದ್ರ ಪಾಂಡೆ ಮತ್ತು ಜೀವ ವಿಜ್ಞಾನ ವಿಭಾಗದ ಡಾ.ರಾಕೇಶ್ ಕುಮಾರ್ ಅವರು RSS ವೇಷಧಾರಿ ವಿದ್ಯಾರ್ಥಿ ಜೊತೆ ತಾವು ವೇಷಧಾರಿಗಳಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಈ ಫೋಟೋ ಸದ್ಯ ವೈರಲ್ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ.ವಿವಿ ಕ್ಯಾಂಪಸ್‌ನಲ್ಲಿ ನಡೆದಿದ್ದ ಆರ್‌ಎಸ್‌ಎಸ್ ಪಥಸಂಚಲನದ ವೇಳೆ ಈ ಫೋಟೋವನ್ನು ಕ್ಲಿಕ್ಕಿಸಲಾಗಿದೆ ಎನ್ನಲಾಗಿದೆ.

ಟಾಪ್ ನ್ಯೂಸ್