ಬೆಂಗಳೂರು;ಗೋವುಗಳ ರಕ್ಷಕರು ಎಂದು ಹೇಳಿಕೊಂಡು ಶಾಲು ಹಾಕಿಕೊಂಡು ಸಂಘಟನೆಗಳ ವ್ಯಕ್ತಿಗಳು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದರೆ ಅಂತವರನ್ನು ಒದ್ದು ಒಳಗಾಕಿ ಎಂದು ಸಚಿವ ಪ್ರಿಯಾಂಕ ಖರ್ಗೆ ಪೊಲೀಸರಿಗೆ ಸೂಚಿಸಿದರು.
ಬಕ್ರೀದ್ ಬರ್ತಾ ಇದೆ ಯಾರೋ ಶಾಲು ಹಾಕಿಕೊಂಡು ಆ ದಳ ಈ ದಳ ಅಂದುಕೊಂಡು ಕಾನೂನು ಕೈಗೆತ್ತಿಕೊಂಡರೆ ಒದ್ದು ಒಳಗಾಕಿ ಎಂದು ಸಚಿವರು ಸೂಚನೆ ನೀಡಿದ್ದಾರೆ.
ಪೊಲೀಸರು ಕೆಲಸವನ್ನು ಅವರಿಗೆ ಕೊಟ್ಟು ನೀವು ಠಾಣೆಯಲ್ಲಿ ಇರುತ್ತೀರಾ ಎಂದು ಪ್ರಶ್ನಿಸಿದ್ದಾರೆ.ಹಿಂದಿನ ಸರ್ಕಾರ ಇರುವಾಗ ಕೆಲವರು ರೈತರ ಮನೆಗಳಿಗೆ ನುಗ್ಗಿ ಗೋವುಗಳನ್ನು ತಂದಿದ್ದಾರೆ ಎಂದು ಹೇಳಿದ್ದಾರೆ.
ಸರಿಯಾದ ದಾಖಲೆ ಇದ್ದುಕೊಂಡು ಗೋವುಗಳನ್ನು ಸಾಗಾಟ ಮಾಡುವವರಿಗೆ ತೊಂದರೆ ಕೊಡಬಾರದು, ಅಂತಹವರ ಮೇಲೆ ಕ್ರಮ ಕೈಗೊಳ್ಳಬೇಕು.ಒಂದು ವೇಳೆ ಗೋವುಗಳ ಸಾಗಾಟ ಅಕ್ರಮ ಆಗಿದ್ದರೆ ಅಂತಹವರ ಮೇಲೆ ನೀವೇ ಕ್ರಮ ಜರುಗಿಸಿ ಬೇರೆಯವರಿಗೆ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಮಾಡಬಾರದು ಎಂದು ಪ್ರಿಯಾಂಕ ಖರ್ಗೆ ಅವರು ಹೇಳಿದ್ದಾರೆ.