ಬೆಂಗಳೂರು:ರಾಜ್ಯ ವಿಧಾನಸಭಾ ಚುನಾವಣೆಯ ಕಾವೇರಿದ್ದರೆ ಕಾಂಗ್ರೆಸ್ ಶಾಸಕ ಹಾಗೂ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ, ಕೆಪಿಸಿಸಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಅವರು ಮಾತ್ರ ಸಂಕಷ್ಟದಲ್ಲಿದ್ದಾರೆ.
ಪ್ರಿಯಾಂಕ ಖರ್ಗೆಯ ಪತ್ನಿ ಗಂಭೀರವಾದ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದಾರೆ. ಹಾಗೂ ಒಡ ಹುಟ್ಟಿದ ಸೋದರ ಕೂಡ ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.
ಬ್ರೇನ್ ಟ್ಯೂಮರ್‌ನಿಂದ ಪ್ರಿಯಾಂಕ್ ಖರ್ಗೆ ಅವರ ಪತ್ನಿ ಶೃತಿ ಪಿ. ಖರ್ಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇನ್ನೊಂದೆಡೆ ಕೆಲ ವರ್ಷಗಳಿಂದ ಕತ್ತಿನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಸಹೋದರ ರಾಹುಲ್ ಖರ್ಗೆ ಅವರ ಆರೋಗ್ಯ ಹಂತ ಹಂತವಾಗಿ ಕ್ಷೀಣಿಸುತ್ತಿದೆ.
ಇದಲ್ಲದೆ ಮಕ್ಕಳ ವಿದ್ಯಾಭ್ಯಾಸ, ಯೋಗಕ್ಷೇಮವೂ ಸಂಪೂರ್ಣ ಪ್ರಿಯಾಂಕ್ ಅವರ ಮೇಲೆ ಬಿದ್ದಿದೆ. ಇಷ್ಟೆಲ್ಲಾ ಸಮಸ್ಯೆ, ನೋವು, ಜವಾಬ್ದಾರಿಗಳ ನಡುವೆಯೇ ಪ್ರಸಕ್ತ ವಿಧಾನಸಭಾ ಚುನಾವಣೆಯನ್ನೂ ಎದುರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಅವರದ್ದಾಗಿದೆ.
ಆಸ್ಪತ್ರೆಯಲ್ಲಿರುವ ಪತ್ನಿಯ ಬಳಿ ಇದ್ದು ಧೈರ್ಯ ತುಂಬಲು ಆಗದಂತಹ ಅನಿವಾರ್ಯತೆ ಇದೆ. ಹೀಗಿದ್ದರೂ ಪತ್ನಿಯ ಆರೋಗ್ಯದ ಮಾಹಿತಿಯನ್ನು ವೈದ್ಯರಿಂದ ಗಂಟೆ ಗಂಟೆಗೂ ಪಡೆಯುತ್ತಿರುವ ಪ್ರಿಯಾಂಕ್ ಖರ್ಗೆ ಅವರು, ಮನೆಯಲ್ಲಿರುವ ಸಹೋದರನ ಆರೋಗ್ಯದ ಕಡೆಯೂ ಗಮನಿಸಿಕೊಂಡು ನಿತ್ಯ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದು ಪ್ರಿಯಾಂಕ ಖರ್ಗೆಯ ಸಧ್ಯದ ಪರಿಸ್ಥಿತಿ ಕೆಟ್ಟದಾಗಿದೆ.
ಇವೆಲ್ಲದರ ಜೊತೆಗೆ ಮಕ್ಕಳ ಬಗ್ಗೆಯೂ ಗಮನಹರಿಸಬೇಕಿದ್ದು,ಪತ್ನಿಯ ಅನಾರೋಗ್ಯ ಪ್ರಿಯಾಂಕ ಖರ್ಗೆಗೆ ಚುನಾವಣೆ ವೇಳೆ ಬಹಳ ನೋವನ್ನು ತಂದೊಡ್ಡಿದೆ.