ಪತ್ರಿಕೆಗಳ ಜಾತಿ ಹುಡುಕಿ ಜಾಹೀರಾತು ನೀಡುವ ಬಿಜೆಪಿ ಸರಕಾರ; ನೊಟೀಸ್ ಹಂಚಿಕೊಂಡು ಪ್ರಿಯಾಂಕ ಖರ್ಗೆ ಆಕ್ರೋಶ

ಬೆಂಗಳೂರು;ಪತ್ರಿಕೆಗಳ ಜಾತಿ ಹುಡುಕಿ ಬಿಜೆಪಿ ಸರಕಾರ ಜಾಹೀರಾತು ನೀಡಲು ಮುಂದಾಗಿದೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಆಕ್ರೋಶ ಹೊರ ಹಾಕಿದ್ದಾರೆ.

ಇದಕ್ಕೆ ಪೂರಕವಾದ ನೊಟೀಸ್ ಒಂದನ್ನು ಹಂಚಿಕೊಂಡ ಪ್ರಿಯಾಂಕ ಖರ್ಗೆ, ಬಿಜೆಪಿ ಸರ್ಕಾರ ಪತ್ರಿಕೆಗಳ ಜಾತಿ ಮೂಲ ಹುಡುಕಿ ಜಾಹೀರಾತು ನೀಡಲು ಹೊರಟಿದೆ. ಪ್ರತಿ ತಿಂಗಳು 2 ಪುಟಗಳ ಸರ್ಕಾರದ ಜಾಹಿರಾತು ಬ್ರಾಹ್ಮಣರ ಮಾಲೀಕತ್ವದ ಪತ್ರಿಕೆಗಳಿಗೆ ಮಾತ್ರವಂತೆ! ಉಳಿದ ಜಾತಿಯವರದ್ದು ಪತ್ರಿಕೆಗಳಲ್ಲವೇ ಸಿಎಂ ಬೊಮ್ಮಾಯಿಯವರೇ ಎಂದು ಪ್ರಶ್ನಿಸಿದ್ದಾರೆ.

ನಾಗಪುರದ ಆದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ನಾಗಪುರದ ನಿಷ್ಠಾವಂತ ನೌಕರರಾಗಿದ್ದಾರೆ ಸಿಎಂ ಎಂದು ಪ್ರಿಯಾಂಕ ಖರ್ಗೆ ಟ್ವೀಟ್ ಮಾಡಿದ್ದಾರೆ‌.

ಟಾಪ್ ನ್ಯೂಸ್