ಮಧ್ಯಪ್ರದೇಶ;ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು
ಮೆದುಳು ನಿಷ್ಕ್ರಿಯಗೊಂಡ ಎಂಟು ತಿಂಗಳ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿ ಮಗುವನ್ನು ರಕ್ಷಿಸುವ ಪ್ರಯತ್ನ ವೈದ್ಯರು ಮಾಡಿದ್ದಾರೆ.
ಮಧ್ಯಪ್ರದೇಶದ ಮಹಾರಾಜ ತುಕೋಜಿರಾವ್ ಹೋಳ್ಕರ್ ಆಸ್ಪತ್ರೆಯಲ್ಲಿ ಈ ಶಸ್ತ್ರಕ್ರಿಯೆ ನಡೆದಿದೆ.ದುರದೃಷ್ಟಾವಶಾತ್ ನವಜಾತ ಶಿಶುವು ಕೂಡಾ ಎರಡು ದಿನಗಳ ಬಳಿಕ ಕೊನೆಯುಸಿರೆಳೆದಿದೆ.
ಅಪಘಾತದಲ್ಲಿ ಗಾಯಗೊಂಡು 19 ವರ್ಷದ ಮಾಲಾ ಎಂಬ ಎಂಟು ತಿಂಗಳ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಗರ್ಭಿಣಿ ಮೆದುಳು ನಿಷ್ಕ್ರಿಯಗೊಂಡು, ವೆಂಟಿಲೇಟರ್ ನಲ್ಲಿದ್ದು ಆಕೆಯ ಜೀವ ಉಳಿಸಲು ನಮ್ಮ ವೈದ್ಯರ ತಂಡ ಸಾಕಷ್ಟು ಪ್ರಯತ್ನ ನಡೆಸಿತ್ತು.ಆದರೆ ಆಕೆಯ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಕೂಡಲೇ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿ ಮಗುವನ್ನು ವೆಂಟಿಲೇಟರ್ ನಲ್ಲಿಟ್ಟು ಜೀವ ಉಳಿಸುವ ಪ್ರಯತ್ನ ಮಾಡಲಾಯಿತು.ಆದರೆ ಮಗು ಮೃತಪಟ್ಟಿದೆ ಎಂದು ಎಂವೈ ಆಸ್ಪತ್ರೆಯ ಡಾ.ಪಿಎಸ್ ಠಾಕೂರ್ ತಿಳಿಸಿದ್ದಾರೆ.