ಚಾಕಲೇಟ್ ಎಂದು ಇಲಿ ಪಾಷಾಣ ತಿಂದು 5 ವರ್ಷದ ಬಾಲಕ ಮೃತ್ಯು

ಶಿವಮೊಗ್ಗ;ಚಾಕಲೇಟ್ ಎಂದು ಇಲಿ ಪಾಷಾಣ ತಿಂದು ಪುಟ್ಟ ಬಾಲಕ ಮೃತಪಟ್ಟ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ತೀರ್ಥಹಳ್ಳಿ ತಾಲೂಕಿನ ಬೆಚ್ಚವಳ್ಳಿಯ ಮೇಲಿನಕೊಪ್ಪದಲ್ಲಿ ಚಂದ್ರಪ್ಪ ಮತ್ತು ಗೀತಾ ದಂಪತಿಯ ಮಗ ಪ್ರೀತಮ್(5)
ಮೃತ ಬಾಲಕ.

ಪ್ರೀತಮ್ ಚಾಕೋಲೆಟ್ ಎಂದು ಇಲಿ ಪಾಷಾಣ ತಿಂದಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿರುವುದನ್ನು ಗಮನಿಸಿ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.ಈ ಬಗ್ಗೆ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್