ರಾಜ್ಯ ವಿಧಾನಸಭಾ ಚುನಾವಣೆ ಕಾವು ಹೆಚ್ಚಾಗಿದೆ.ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಜನರನ್ನು ಸೆಳೆಯಲು ಕಸರತ್ತು ಮಾಡುತ್ತಿದೆ.ಇದರ ಮಧ್ಯೆ ಸಮೀಕ್ಷೆಯೊಂದರ ವರದಿ ಬಹಿರಂಗವಾಗಿದೆ.
ಲೋಕ್‌ಪೋಲ್ ಸಮೀಕ್ಷೆ ಪ್ರಕಟಗೊಂಡಿದ್ದು,2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತ ಬರಲಿದೆ ಎಂದು ಲೋಕ್‌ಪೋಲ್ ಸಮೀಕ್ಷೆ ಹೇಳಿದೆ.
ಲೋಕ್‌ಪೋಲ್ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ 116 ರಿಂದ 122 ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಲಾಗಿದ್ದು,ಇನ್ನೂ ಆಡಳಿತರೂಢ ಬಿಜೆಪಿ ಪಕ್ಷ 140 ಗೆಲ್ಲುತ್ತೇವೆ ಎಂದರೂ ಸಮೀಕ್ಷೆಯ ಪ್ರಕಾರ ಬಿಜೆಪಿಗೆ 77 ರಿಂದ 83 ಸ್ಥಾನಗಳು ಸಿಗಲಿದೆ.
ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಗೆ 21 ರಿಂದ 27 ಸ್ಥಾನಗಳು ಸಿಗಬಹುದು ಎಂದು ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.ಇನ್ನೂ ಪಕ್ಷೇತರರು 1 ರಿಂದ 4 ಮಂದಿ ಗೆಲುವು ಸಾಧಿಸುವ ಸಾಧ್ಯತೆ ಇದೆ.
ಬಿಜೆಪಿಗೆ ಶೇ 33 ರಿಂದ 36 ರಷ್ಟು ಮತಗಳು ಚಲಾವಣೆ ಆದರೆ ಕಾಂಗ್ರೆಸ್‌ಗೆ ಶೇ 39 ರಿಂದ 42 ರಷ್ಟು ಪ್ರಮಾಣದಲ್ಲಿ ಮತ ಸಿಗಬಹುದು. ಇನ್ನು ಜೆಡಿಎಸ್‌ಗೆ ಶೇ 15 ರಿಂದ 18 ರಷ್ಟು ಮತ ಪಡೆಯಬಹುದು ಎಂದು ಸಮೀಕ್ಷೆ ತಿಳಿಸಿದೆ.