ಅಧಿಕಾರಿಗಳನ್ನು ಕಂಡು ನಗದು ತುಂಬಿದ್ದ ಆರು ಪೆಟ್ಟಿಗೆಯನ್ನು ಪಕ್ಕದ ಮನೆಯ ಟೆರೇಸಿಗೆ ಎಸೆದ ಮಹಿಳೆ!

ಅಧಿಕಾರಿಗಳನ್ನು ಕಂಡು ನಗದು ತುಂಬಿದ್ದ ಆರು ಪೆಟ್ಟಿಗೆಯನ್ನು ಪಕ್ಕದ ಮನೆಯ ಟೆರೇಸಿಗೆ ಎಸೆದ ಮಹಿಳೆ

ಒಡಿಶಾ;ಸರಕಾರಿ ಅಧಿಕಾರಿಯೋರ್ವರ ನಿವಾಸದ ಮೇಲೆ
ಒಡಿಶಾ ವಿಜೆಲೆನ್ಸ್‌ ವಿಭಾಗವು ದಾಳಿ ನಡೆಸಿದ್ದು, 3 ಕೋಟಿ ರೂ.ಗೂ ಅಧಿಕ ನಗದನ್ನು ವಶಪಡಿಸಿಕೊಂಡಿದ್ದಾರೆ.

ನಬರಂಗಪುರ ಜಿಲ್ಲೆಯ ಹೆಚ್ಚುವರಿ ಸಬ್‌ ಕಲೆಕ್ಟರ್‌ ಒಎಎಸ್‌ ಅಧಿಕಾರಿ ಪ್ರಶಾಂತ್‌ ಕುಮಾರ್‌ ರಾವುತ್‌ ಅವರಿಗೆ ಸಂಬಂಧಿಸಿದ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಪ್ರಶಾಂತ್ ಗೆ ಸಂಬಂಧಿಸಿದ ಭುವನೇಶ್ವರ, ನಬರಂಗ್‌ಪುರ ಸೇರಿದಂತೆ ಹಲವು ಕಡೆಗಳಲ್ಲಿನ‌ ಮನೆಗಳ ಮೇಲೆ ದಾಳಿಗಳನ್ನು ನಡೆಸಲಾಗಿದೆ.

ಭುವನೇಶ್ವರದ ಕಾನನ್‌ ವಿಹಾರ್‌ನಲ್ಲಿರುವ ಮನೆಯ ಮೇಲೆ ದಾಳಿ ನಡೆಸುವ ಸಮಯದಲ್ಲಿ ಪ್ರಶಾಂತ್‌ ಕುಮಾರ್‌ ಅವರ ಪತ್ನಿ ನಗದು ತುಂಬಿದ್ದ ಆರು ರಟ್ಟಿನ ಪೆಟ್ಟಿಗೆಗಳನ್ನು ಪಕ್ಕದ ಮನೆಯ ಟೆರೇಸಿಗೆ ಎಸೆದಿದ್ದಾರೆ. ಹಣವನ್ನು ಮುಚ್ಚಿಡಿ ಎಂದು ಪಕ್ಕದ ಮನೆಯವರ ಹತ್ತಿರ ಕೇಳಿಕೊಂಡಿದ್ದಾರೆ.

ಇದನ್ನು ಗಮನಿಸಿದ ಸಿಬ್ಬಂದಿ ಪಕ್ಕದ ಮನೆಯಿಂದ ಹಣದ ಪೆಟ್ಟಿಗೆಗಳನ್ನು ವಶಪಡಿಸಿಕೊಂಡಿದ್ದಾರೆ.

ಇದೇ ಅಧಿಕಾರಿಯ ನಬರಂಗ್‌ ಪುರದ ನಿವಾಸದಿಂದ ಒಟ್ಟು 89.5 ಲಕ್ಷ ರೂ. ನಗದು ಮತ್ತು ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು