43 ವರ್ಷದ ಸೊಸೆಗೆ ಮೂತ್ರಪಿಂಡ ದಾನ ಮಾಡಿ ಮಾದರಿಯಾದ 70 ವರ್ಷದ ಅತ್ತೆ

ಮಹಾರಾಷ್ಟ್ರ;43 ವರ್ಷದ ಸೊಸೆಗೆ 70 ವರ್ಷದ ಅತ್ತೆ ಮೂತ್ರಪಿಂಡಗಳನ್ನು ದಾನ ಮಾಡಿರುವ ಅಪರೂಪದ ಘಟನೆ
ಮುಂಬೈನಿಂದ ವರದಿಯಾಗಿದೆ.

ಮುಂಬಯಿಯ ಕಂಡಿವ್ಲಿಯಲ್ಲಿ ಅತ್ತೆ ಪ್ರಭಾ ಮೋಟಾ ಅವರು ಸೊಸೆಗೆ ಕಿಡ್ನಿ ದಾನ ಮಾಡಿ ಸುದ್ದಿಯಾಗಿದ್ದಾರೆ.ಮೋಟಾ ಅವರ ಬಗ್ಗೆ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್ ಸಾವಂತ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

2022ರ ನವೆಂಬರ್‌ನಲ್ಲಿ ಅಮಿಶಾ ಅವರಲ್ಲಿ ಮೂತ್ರಪಿಂಡ ಸಮಸ್ಯೆ ಇರುವುದು ಪತ್ತೆಯಾಗಿತ್ತು.ಅವರು ಶೀಘ್ರವೇ ಮೂತ್ರಪಿಂಡ ಕಸಿ ಚಿಕಿತ್ಸೆಗೆ ಒಳಗಾಗಬೇಕು.ಇಲ್ಲವಾದಲ್ಲಿ ಡಯಾಲಿಸಿಸ್ ಪ್ರಾರಂಭ ಮಾಡಬೇಕೆಂದು ಡಾ.ಜತಿನ್ ಕೊಠಾರಿ ತಿಳಿಸಿದ್ದರು.ಅಮಿಶಾ ಮತ್ತು ಆಕೆಯ ಗಂಡ ಪೋಷಕರ ಬಳಿ ಈ ನೋವಿನ ಸಂಗತಿ ಹೇಳಿಕೊಂಡಿದ್ದರು.

ಅಮಿಶಾಳ ಅಳು ನೋಡಿ ಭಾವುಕರಾದ ನನ್ನ ಅಮ್ಮ ಮೂತ್ರಪಿಂಡವನ್ನು ದಾನ ಮಾಡಲು ಸಿದ್ಧರಿರುವುದಾಗಿ ಹೇಳಿದರು ಎಂದು ಜಿಗ್ನೇಶ್ ತಿಳಿಸಿದ್ದಾರೆ.

ಮಧುಮೇಹದ ಹಿನ್ನೆಲೆ ಜಿಗ್ನೇಶ್ ಗೆ ಕಿಡ್ನಿ ನೀಡಲು ಸಮರ್ಥರಾಗಿರಲಿಲ್ಲ.ಆಕೆಯ ತಾಯಿ ಬೈಪಾಸ್ ಸರ್ಜರಿಗೆ ಒಳಗಾಗಿದ್ದರೆ.ಆಕೆಯ ತಂದೆ ಅನಿಯಂತ್ರಿತ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರು.ಕೆಲವು ದಿನಗಳ ಬಳಿಕ ಪ್ರಭಾ ಅವರು ತಾವು ಮೂತ್ರಪಿಂಡ ದಾನ ಮಾಡುವುದಾಗಿ ಮತ್ತೆ ಹೇಳಿದರು.ಅವರನ್ನು ತಪಾಸಣೆಗೆ ಒಳಪಡಿಸಿದಾಗ ಅವರು ಸಂಪೂರ್ಣ ಅರ್ಹರಾಗಿರುವುದು ದೃಢಪಟ್ಟಿತು.

ಅದರಂತೆ ಜುಹುದಲ್ಲಿನ ನಾನಾವತಿ ಆಸ್ಪತ್ರೆಯಲ್ಲಿ ಆ.1ರಂದು ಮೂತ್ರಪಿಂಡ ಕಸಿ ಚಿಕಿತ್ಸೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಟಾಪ್ ನ್ಯೂಸ್