ಒಂದೂವರೆ ವರ್ಷಗಳ ಕಾಲ ಮೂತ್ರವನ್ನು ವಿಸರ್ಜಿಸದೆ ಮಹಿಳೆಯೋರ್ವರು ವಿಚಿತ್ರ ಖಾಯಿಲೆಯಿಂದ ಬಳಲಿದ ಬಗ್ಗೆ ವರದಿಯಾಗಿದೆ.
ಯುನೈಟೆಡ್ ಕಿಂಗ್ಡಮ್ನ, 30ವರ್ಷದ ಎಲ್ಲೆ ಆಡಮ್ಸ್ ಎಂಬ ಮಹಿಳೆಗೆ 14 ತಿಂಗಳುಗಳ ಕಾಲ ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗಿಲ್ಲ, ಆದರೂ ಬದುಕಿದ್ದಾರೆ ಎನ್ನುವ ಅಚ್ಚರಿ ಸುದ್ದಿ ವರದಿಯಾಗಿದೆ.
ಆಡಮ್ಸ್ ನೀರಿನ ಪದಾರ್ಥ ಕುಡಿದರೂ ಮೂತ್ರ ಹೊರಹೋಗುತ್ತಿರಲಿಲ್ಲ.ಮೂತ್ರಕ್ಕೆ ಹೋದರೂ, ಮೂತ್ರ ಮಾಡಲು ಸಾಧ್ಯವಾಗುತ್ತಿರಲಿಲ್ಲವಂತೆ. ಈ ಬಗ್ಗೆ ಆಕೆಯೇ ತನ್ನ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.
‘ಫೌಲರ್ ಸಿಂಡ್ರೋಮ್’ ಎಂಬ ಅಪರೂಪದ ಕಾಯಿಲೆ ಇದಾಗಿದ್ದು, ಈ ಕಾಯಿಲೆ ನನ್ನ ಜೀವನವನ್ನು ಸಂಪೂರ್ಣವಾಗಿಯೇ ಬದಲಿಸಿಬಿಟ್ಟಿತು. ಹಾಸಿಗೆಯೇ ಮೇಲೆ ಜೀವನ ಕಳೆವಂತಾಯ್ತು. ಎದ್ದು ಟಾಯ್ಲೆಟ್ಗೂ ಹೋಗದ ಸ್ಥಿತಿ ತಲುಪಿದೆ ಎಂದು ಆಡಮ್ಸ್ ಬರೆದುಕೊಂಡಿದ್ದಾರೆ.
ಈ ಕಾಯಿಲೆಯಲ್ಲಿ ಮೂತ್ರಕೋಶದ ತುದಿಯಲ್ಲಿರುವ ಸ್ನಾಯುಗಳು ತೆರೆಯುವುದು ಮತ್ತು ಬಂದ್ ಆಗುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಹೀಗಾದಾಗ ಮೂತ್ರ ಅದರಷ್ಟಕ್ಕೆ ಹೊರಹೋಗುವುದಿಲ್ಲ ಎನ್ನಲಾಗಿದೆ.
2020ರಲ್ಲಿ ಮೊದಲ ಬಾರಿಗೆ ಮೂತ್ರ ವಿಸರ್ಜನೆ ಆಗದೆ ಇದ್ದಾಗ ಆಕೆ ಮೊದಲು ಲಂಡನ್ನಲ್ಲಿರುವ ಸೇಂಟ್ ಥಾಮಸ್ ಆಸ್ಪತ್ರೆಗೆ ಹೋದರು. ಸ್ಕ್ಯಾನ್ ಮಾಡಿದ ವೈದ್ಯರು, ನಿಮ್ಮ ಮೂತ್ರಕೋಶದಲ್ಲಿ ಸುಮಾರು 1 ಲೀಟರ್ ಮೂತ್ರ ತುಂಬಿದೆ ಎಂದು ಹೇಳಿ, ಅದನ್ನು ಟ್ಯೂಬ್ ಹಾಕಿ ಹೊರತೆಗೆದು, ಕಳಿಸಿದರು. ಆದರೆ ಮರುದಿನವೂ ಅದೇ ಸಮಸ್ಯೆ ಆಕೆಗೆ ಉಂಟಾಗಿತ್ತು.
ಒಂದು ವರ್ಷಕ್ಕೂ ಅಧಿಕ ಕಾಲದ ಬಳಿಕ 2021ರ ಡಿಸೆಂಬರ್ನಲ್ಲಿ ಅವರಿಗೆ ಫೌಲರ್ ಸಿಂಡ್ರೋಮ್ ಇರುವುದು ಪತ್ತೆಯಾಗಿದೆ.