ಯೂಟ್ಯೂಬ್​ ಮೂಲಕ​ ಕಲಿತು 60 ಲಕ್ಷ ವೇತನದ ಉದ್ಯೋಗ ಪಡೆದುಕೊಂಡ ಯುವತಿ

ಯೂಟ್ಯೂಬ್​ ನಿಂದಲೇ ಕೋಡಿಂಗ್​ ಕಲಿತು ದಲಿತ ಯುವತಿಯೋರ್ವಳು ಗೂಗಲ್​ ಕಂಪನಿಯಲ್ಲಿ ವರ್ಷಕ್ಕೆ 60 ಲಕ್ಷ ರೂಪಾಯಿ ಸಂಬಳದ ಕೆಲಸದ ಆಫರ್ ಪಡೆದುಕೊಂಡಿದ್ದಾರೆ.

ಗುಂಟೂರಿನರಾವೂರಿ ಪೂಜಿತಾ ಬಿಟೆಕ್‌ನ ಮೊದಲ ವರ್ಷದಲ್ಲಿದ್ದಾಗ ಕೋವಿಡ್-19 ಸೋಂಕು ಪ್ರಾರಂಭವಾಗಿತ್ತು.
ಲಾಕ್‌ಡೌನ್ ನಿಂದ ಕಾಲೇಜಿಗೆ ಹೋಗಲು ಸಾಧ್ಯವಾಗಿರಲಿಲ್ಲ.

ಆನ್‌ಲೈನ್‌ನಲ್ಲಿ ಕಾಲೇಜು ಸಿಬ್ಬಂದಿ ನೀಡುವ ಉಪನ್ಯಾಸಗಳನ್ನು ಕಲಿತುಕೊಂಡಿದ್ದಾಳೆ. ಜೊತೆಗೆ Leatcode, CodeChef, Prepbytes, BinarySearch.com ಇತ್ಯಾದಿ ಸೈಟ್‌ಗಳ ಮೂಲಕ ಮತ್ತು ಯ್ಯೂಟೂಬ್ ಮೂಲಕ ಕೋಡಿಂಗ್ ಕಲಿತು ಕೊಂಡಿದ್ದಾಳೆ.

ಇದೀಗ ಅಮೆಜಾನ್ ಮತ್ತು ಅಡೋಬ್ ಕಂಪನಿಗಳು 45 ಲಕ್ಷ ರೂಪಾಯಿಗಳ ವಾರ್ಷಿಕ ಪ್ಯಾಕೇಜ್ ನೀಡಲು ಮುಂದೆ ಬಂದಿವೆ.ಆದರೆ ಪೂಜಿತಾ ಗೂಗಲ್​​ನ 60 ಲಕ್ಷ ರೂಪಾಯಿ ಪ್ಯಾಕೇಜ್ ಆಯ್ಕೆ ಮಾಡಿಕೊಂಡಿದ್ದಾರೆ.

ಟಾಪ್ ನ್ಯೂಸ್