ಪೊಲೀಸ್ ಠಾಣೆಯ ಎದುರೇ ರೀಲ್ಸ್ ಮಾಡಿದ ಇಬ್ಬರು ಯುವಕರ ಬಂಧನ

ಪೊಲೀಸ್ ಠಾಣೆಯ ಎದುರೇ ರೀಲ್ಸ್ ಮಾಡಿದ ಇಬ್ಬರು ಯುವಕರ ಬಂಧನ

ಉತ್ತರಪ್ರದೇಶ; ಠಾಣೆಯ ಎದುರು ಇಬ್ಬರು ಯುವಕರು ರೀಲ್ಸ್ ಮಾಡಿರುವ ಘಟನೆ ಗೊಂಡಾದ ವಜೀರ್​ಗಂಜ್​ ಪೊಲೀಸ್​ ​ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರೀಲ್ಸ್ ವೀಡಿಯೋ ವೈರಲ್​ ಆಗುತ್ತಿದ್ದಂತೆಯೇ ಪೊಲೀಸ್​ ಠಾಣೆಯ ಎದುರು ರೀಲ್ಸ್ ವಿಡಿಯೋ ಚಿತ್ರೀಕರಣ ಮಾಡುವುದು ಕಾನೂನುಬಾಹಿರವಲ್ಲವೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ

ಈ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಶೇರ್​ ಮಾಡಿರುವ ವಜೀರ್​ಗಂಜ್​ ಠಾಣಾ ಪೊಲೀಸರು, ಪೊಲೀಸ್​ ಠಾಣೆಯ ಆವರಣದಲ್ಲಿ ರೀಲ್ಸ್​ ಮಾಡಿದ ಇಬ್ಬರನ್ನು ಬಂಧಿಸಿದ್ದೇವೆ.ಯುವಕರು ತಾವು ಮಾಡಿದ ರೀಲ್ಸ್​ನ್ನು ಎಕ್ಸ್​ನಲ್ಲಿ ಶೇರ್​ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಪೊಲೀಸರ ಈ ಟ್ವೀಟ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಪೊಲೀಸ್​ ಠಾಣೆಯ ಆವರಣದಲ್ಲಿ ರೀಲ್ಸ್ ಮಾಡುವುದು ಅಪರಾಧವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಟಾಪ್ ನ್ಯೂಸ್