ಗಲಾಟೆ ನಿಯಂತ್ರಿಸಲು ಹೋದ ಪೊಲೀಸ್ ಪೇದೆಯನ್ನು ಹೊಡೆದು ಕೊಲೆ ಮಾಡಿದ ದುಷ್ಕರ್ಮಿಗಳು

ಜಗಳ ನಿಯಂತ್ರಿಸಲು ಹೋದ ಕರ್ತವ್ಯ ನಿರತ ಪೊಲೀಸ್ ಪೇದೆಯನ್ನೇ ಹೊಡೆದು ಮಹಡಿಯಿಂದ ತಳ್ಳಿ ಕೊಲೆ ಮಾಡಿದ ಆಘಾತಕಾರಿ ಘಟನೆ ಪಂಜಾಬ್‌ನ ಬರ್ನಾಲಾದಲ್ಲಿ ನಡೆದಿದೆ.

ಹೆಡ್ ಕಾನ್‌ಸ್ಟೆಬಲ್ ದರ್ಶನ್ ಸಿಂಗ್ ಮೃತರು. ಇವರು ಸಿಂಗ್ ಸಿಟಿ 1 ಪೊಲೀಸ್ ಠಾಣೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.

ಬರ್ನಾಲಾದ ರೆಸ್ಟೋರೆಂಟ್‌ವೊಂದರಲ್ಲಿ ಆಹಾರ ಮತ್ತು ಮದ್ಯಪಾನ ಮಾಡಿದ ಬಿಲ್‌ಗಾಗಿ ರೆಸ್ಟೋರೆಂಟ್‌ನ ಮಾಲಕರು ಮತ್ತು ನಾಲ್ವರು ಕಬಡ್ಡಿ ಆಟಗಾರರ ನಡುವೆ ಜಗಳ ನಡೆದಿದೆ.

ಕಬಡ್ಡಿ ಆಟಗಾರರು ಬಿಲ್ ಪಾವತಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ರೆಸ್ಟೋರೆಂಟ್ ಮಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ತೆರಳಿದ್ದ ಪೊಲೀಸ್‌ ತಂಡದಲ್ಲಿ ಹೆಡ್ ಕಾನ್‌ಸ್ಟೆಬಲ್ ದರ್ಶನ್ ಸಿಂಗ್ ಇದ್ದರು. ಪೋಲೀಸ್ ತಂಡವು ರೆಸ್ಟೋರೆಂಟ್‌ಗೆ ತೆರಳಿ ನಾಲ್ವರು ಕಬಡ್ಡಿ ಆಟಗಾರರನ್ನು ಕರೆದುಕೊಂಡು ಹೋಗುತ್ತಿದ್ದಾಗ ಅವರು ಸಿಂಗ್ ಮೇಲೆ ಹಲ್ಲೆ ನಡೆಸಿದ್ದಾರೆ.

ಈ ಕುರಿತು ಪ್ರತ್ಯಕ್ಷದರ್ಶಿ ಸರಬ್ಜಿತ್ ಸಿಂಗ್ ಮಾಹಿತಿ ನೀಡಿದ್ದು, ರಾತ್ರಿ ರೆಸ್ಟೋರೆಂಟ್‌ನಲ್ಲಿ ನಾಲ್ವರು ಕಬಡ್ಡಿ ಆಟಗಾರರು ಮದ್ಯ ಸೇವಿಸಿದ್ದಾರೆ. ನಂತರ ಅವರು ಬಿಲ್ ಪಾವತಿಸಲು ನಿರಾಕರಿಸಿದ್ದು, ಈ ವೇಳೆ ವಾಗ್ವಾದ ನಡೆದಿದೆ. ಈ ಬಗ್ಗೆ ರೆಸ್ಟೋರೆಂಟ್ ಮಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ದರ್ಶನ್‌ ಸಿಂಗ್ ಮತ್ತು ಇತರ ಪೊಲೀಸ್ ಸಿಬ್ಬಂದಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದ್ದಾರೆ.

ಆದರೆ ಕಬಡ್ಡಿ ಆಟಗಾರರು ಪೊಲೀಸರ ಮಾತಿಗೆ ಸ್ಪಂದಿಸಲು ನಿರಾಕರಿಸಿದ್ದಾರೆ. ಪೊಲೀಸರು ಕಬಡ್ಡಿ ಆಟಗಾರರನ್ನು ಪೊಲೀಸ್ ವಾಹನಕ್ಕೆ ಏರಲು ಹೇಳಿದ್ದಾರೆ. ಈ ವೇಳೆ ಆರೋಪಿಗಳು ಸಿಂಗ್ ಮೇಲೆ ಹಲ್ಲೆ ನಡೆಸಿ ಮಹಡಿಯಿಂದ ತಳ್ಳಿದ್ದಾರೆ. ಮಹಿಡಿಯಿಂದ ಬಿದ್ದು ಪೇದೆ ಸಿಂಗ್‌ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು