ರಾತ್ರಿ ಮಲಗಿದ್ದಲ್ಲೇ ಪೇದೆ ಹೃದಯಾಘಾತದಿಂದ ಮೃತ್ಯು

ರಾಯಚೂರು:ಪೊಲೀಸ್​ ಕಾನ್ಸ್​ಟೇಬಲ್ ಓರ್ವರು ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಮಸ್ಕಿ ಪೊಲೀಸ್ ಠಾಣೆ ಕಾನ್ಸ್​ಟೇಬಲ್​ ಬಸನಗೌಡ(34) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದ ನಿವಾಸಿಯಾಗಿದ್ದ ಬಸನಗೌಡ, ಬಿಪಿ,ಶುಗರ್ ಹಾಗೂ ಹೃದಯ ಸಂಬಂಧಿ ಖಾಯಿಲೆ ಇಲ್ಲದೆ ಆರೋಗ್ಯವಾಗಿದ್ದರು.

ನಿನ್ನೆ ರಾತ್ರಿ ಮಲಗಿದ್ದಲ್ಲೇ ಬಸನಗೌಡಗೆ ಹೃದಯಾಘಾತವಾಗಿದೆ ಎಂದು ಹೇಳಲಾಗಿದೆ.ಯುವ ಸಮುದಾಯವೇ ಇತ್ತೀಚೆಗೆ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಸುದ್ದಿಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು ಆತಂಕವನ್ನು ಉಂಟು ಮಾಡಿದೆ.

ಟಾಪ್ ನ್ಯೂಸ್