ಸಾರಾ ಅಬೂಬಕ್ಕರ್ ಗೆ ಅಂತಿಮ ಗೌರವ ಸಲ್ಲಿಸದೆ ಕಡೆಗಣನೆ- ಸರಕಾರದ ನಡೆಗೆ ಖಂಡನೆ

ಮಂಗಳೂರು:ಖ್ಯಾತ ಸಾಹಿತಿ, ನಾಡೋಜಾ ಸಾರಾ ಅಬೂಬಕರ್ ನಿಧನ ಹೊಂದಿದ ಸಂದರ್ಭ ಸರಿಯಾದ ಗೌರವ ಸಲ್ಲಿಸದೆ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಕಡೆಗಣಿಸಿರುವುದಕ್ಕೆ ತೀವ್ರವಾದ ಖಂಡನೆ ವ್ಯಕ್ತವಾಗಿದೆ.

ಈ ಬಗ್ಗೆ ಜಂಟಿ ಹೇಳಿಕೆ ಬಿಡುಗಡೆಗೊಳಿಸಿರುವ
ಪ್ರೊ.ನರೇಂದ್ರ ನಾಯಕ್, ಟಿ.ಆರ್.ಭಟ್, ಚಂದ್ರಕಲಾ ನಂದಾವರ, ಪ್ರೊ. ಚಂದ್ರ ಪೂಜಾರಿ, ಪ್ರೊ.ಪಟ್ಟಾಭಿರಾಮ ಸೋಮಯಾಜಿ, ಬಿ.ಎಂ.ರೋಹಿಣಿ, ಎಂ.ದೇವದಾಸ್, ಬಿ.ಎಂ.ಹನೀಫ್, ವಾಸುದೇವ ಉಚ್ಚಿಲ, ಡಾ. ಬಿ.ಶ್ರೀನಿವಾಸ ಕಕ್ಕಿಲ್ಲಾಯ, ಗುಲಾಬಿ ಬಿಳಿಮಲೆ, ಪ್ರೊ.ಕೆ.ರಾಜೇಂದ್ರ ಉಡುಪ, ಮೋಹನ್ ಪಿ. ವಿ., ಐ.ಕೆ.ಬೊಳುವಾರು, ಯಶವಂತ ಮರೋಳಿ, ಮುನೀರ್ ಕಾಟಿಪಳ್ಳ, ಡಾ.ಕೃಷ್ಣಪ್ಪ ಕೊಂಚಾಡಿ, ಶ್ರೀನಿವಾಸ ಕಾರ್ಕಳ ಅವರು ಸರಕಾರ ಮತ್ತು ಜಿಲ್ಲಾಡಳಿತದ ನಡೆಯನ್ನು‌ ಖಂಡಿಸಿದ್ದಾರೆ.

ಸಾರಾ ಅಬೂಬಕರ್ ಪ್ರಖ್ಯಾತ ಬರಹಗಾರರು, ಕ‌ರ್ನಾಟಕದ ಮುಸ್ಲಿಮ್ ಸಮುದಾಯ ಕನ್ನಡದಲ್ಲಿ ಸಾಹಿತ್ಯ ಕೃಷಿ ನಡೆಸುವುದೇ ಅಪರೂಪವಾಗಿದ್ದ ಕಾಲಘಟ್ಟದಲ್ಲಿ ಆ ಸಮುದಾಯದ ಹೆಣ್ಣು ಮಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ.

ತನ್ನ ಸಾಧನೆಗಾಗಿ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇಂತಹ ಗಣ್ಯ ಬರಹಗಾರ್ತಿ, ಲೇಖಕಿ ಅಗಲಿದ ಸಂದರ್ಭ ಸಹಜವಾಗಿಯೇ ಅವರಿಗೆ ಸರಕಾರಿ ಗೌರವಗಳು ಸಲ್ಲಬೇಕಿತ್ತು. ಆದರೆ ಸರಕಾರದ ಯಾವುದೇ ಅಂತಿಮ ಗೌರವಗಳು ಅವರಿಗೆ ಸಲ್ಲಲಿಲ್ಲ ಎಂದು ವಿಷಾದ ವ್ಯಕ್ತಪಡಿಸಲಾಗಿದೆ.

ಸಾರಾ ಅಬೂಬಕರ್ ಅವರಿಗೆ ಸರಕಾರದ, ಜಿಲ್ಲಾಡಳಿತದ ಪ್ರತಿನಿಧಿಗಳು ಅಧಿಕೃತ ಗೌರವ ಸಲ್ಲಿಸಲಿಲ್ಲ. ಉಸ್ತುವಾರಿ ಸಚಿವರು, ಶಾಸಕರುಗಳು ನಗರದಲ್ಲೇ ಇದ್ದರೂ ಅಂತಿಮ ದರ್ಶನ ಪಡೆಯಲಿಲ್ಲ. ಇದು ಅಪಾರ ನೋವಿನ ವಿಚಾರವಾಗಿದೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಟಾಪ್ ನ್ಯೂಸ್