ನವದಹಲಿ;ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ, “ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ” (AB-PMJAY)ಯಡಿ ಅವ್ಯವಹಾರ ನಡೆದಿದೆ ಎಂದು ಸಿಎಜಿ ವರದಿ ತಿಳಿಸಿದೆ.
ಭಾರತದ ಕಂಟ್ರೋಲರ್– ಆಡಿಟರ್ ಜನರಲ್ (ಸಿಎಜಿ) ಆಯುಷ್ಮಾನ್ ಭಾರತ್–ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಬಹುದೊಡ್ಡ ಅವ್ಯವಹರಾದ ಬಗ್ಗೆ ಉಲ್ಲೇಖಿಸಿದ್ದು, 7.5 ಲಕ್ಷ ಫಲಾನುಭವಿಗಳು ಎಂದು ಹೇಳಲಾದ ವ್ಯಕ್ತಿಗಳು “ಒಂದೇ ಮೊಬೈಲ್” ಸಂಖ್ಯೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ಇದಲ್ಲದೆ ದಾಖಲೆ ಪ್ರಕಾರ ಈ ಮೊದಲೇ ಮೃತಪಟ್ಟಿದ್ದಾರೆಂದು ಘೋಷಿಸಿಲಾಗಿದ್ದ 3,446 ರೋಗಿಗಳ ಚಿಕಿತ್ಸೆಗಾಗಿ 6.97 ಕೋಟಿ ರೂಪಾಯಿ ಪಾವತಿಸಲಾಗಿದೆ ಎಂದು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ತಿಳಿಸಿದೆ.
ಗರಿಷ್ಠ ಸಂಖ್ಯೆಯ ‘ಮೃತ’ ರೋಗಿಗಳು – 966 – ಕೇರಳದಲ್ಲಿ ಕಂಡುಬಂದಿದೆ, ಅಲ್ಲಿ ಅವರ ಚಿಕಿತ್ಸೆಗಾಗಿ 2.60 ಕೋಟಿ ರೂ. ಇದಾದ ನಂತರ ಮಧ್ಯಪ್ರದೇಶದಲ್ಲಿ 403 ರೋಗಿಗಳಿಗೆ 1.12 ಕೋಟಿ ರೂ. ಮತ್ತು ಛತ್ತೀಸ್‌ಗಢದಲ್ಲಿ 365 ರೋಗಿಗಳಿಗೆ 33.70 ಲಕ್ಷ ರೂ.ವೆಚ್ಚ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ನಿಯಮಗಳ ಪ್ರಕಾರ, ರೋಗಿಯು ಆಸ್ಪತ್ರೆಗೆ ದಾಖಲಾದ ನಂತರ ಮತ್ತು ಡಿಸ್ಚಾರ್ಜ್ ಆಗುವ ಮೊದಲು ಸಾವನ್ನಪ್ಪಿದರೆ, ಲೆಕ್ಕಪರಿಶೋಧನೆಯ ನಂತರ ಆಸ್ಪತ್ರೆಗೆ ಪಾವತಿಸಲಾಗುತ್ತದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಆದರೆ ಈ ಹಿಂದೆ ಸತ್ತವರೆಂದು ಗುರುತಿಸಲಾದ ರೋಗಿಗಳಿಗೆ ಯೋಜನೆಯಡಿಯಲ್ಲಿ ಚಿಕಿತ್ಸೆಯನ್ನು ಮುಂದುವರಿಸಲು ವ್ಯವಸ್ಥೆಯು ಅನುಮತಿಸಿದೆ ವರದಿ ಹೇಳಿದೆ.
ಈ ಯೋಜನೆಯಡಿ ಜನರಿಗೆ ನಗದು ರಹಿತ ಸೇವೆ ನೀಡಬೇಕಾಗಿತ್ತು. ಆದರೆ ಫಲಾನುಭವಿಗಳು ಚಿಕಿತ್ಸೆಗಾಗಿ ಹಣವನ್ನು ಪಾವತಿಸಿದ್ದಾರೆ ಎಂದು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಅವರ ವರದಿ ಹೇಳಿದೆ.
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾದ PMJAY ಕುರಿತಾದ ಲೆಕ್ಕಪರಿಶೋಧನಾ ವರದಿಯಲ್ಲಿ, CAG, ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ ನಂತರ, ಎಲ್ಲಾ ಪರೀಕ್ಷೆಗಳು, ಔಷಧಿಗಳ ವೆಚ್ಚವನ್ನು ಆಸ್ಪತ್ರೆಯು ಭರಿಸಬೇಕಾಗುತ್ತದೆ. ಅದಕ್ಕೆ ತಗಲುವ ವೆಚ್ಚವನ್ನು ಪ್ಯಾಕೇಜ್ ಮೊತ್ತದಲ್ಲಿ ಸೇರಿಸಲಾಗಿದೆ.
2018 ರಲ್ಲಿ ಹೊರತಂದ, AB-PMJAY ಯೋಜನೆಯಡಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂಪಾಯಿಗಳವರೆಗೆ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ. ಸರ್ಕಾರದ ಮಾಹಿತಿ ಪ್ರಕಾರ ಆರೋಗ್ಯ ರಕ್ಷಣೆ ಯೋಜನೆಯು 50 ಕೋಟಿ ಜನರನ್ನು ಒಳಗೊಂಡಿದೆ.