ನಿಷೇಧಿತ PFI ಸಂಘಟನೆ ಕುರಿತ ಸ್ಟಿಕ್ಕರ್ ಅಂಟಿಸಿದ ಆರೋಪ; ಪ್ರಕರಣ ದಾಖಲು

ನಿಷೇಧಿತ PFI ಕುರಿತ ಸ್ಟಿಕ್ಕರ್ ಅಂಟಿಸಿದ ಆರೋಪ; ಪ್ರಕರಣ ದಾಖಲು

ಮುಂಬೈ;ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ಯನ್ನು ಹೊಗಳಿ ಸ್ಟಿಕ್ಕರ್‌ಗಳನ್ನು ಅಂಟಿಸಿರುವ ಮತ್ತು ನವಿ ಮುಂಬೈನ ಕೆಲವು ಮನೆಗಳಲ್ಲಿ ಕ್ರ್ಯಾಕರ್ ಬಾಂಬ್‌ಗಳನ್ನು ಕಟ್ಟಿರುವ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಸ್ಟಿಕ್ಕರ್‌ಗಳು ಮತ್ತು ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.

ಕೆಲವು ವ್ಯಕ್ತಿಗಳು ಸ್ಟಿಕ್ಕರ್‌ಗಳ ಮೇಲೆ ಹಸಿರು ಶಾಯಿಯಿಂದ “ಪಿಎಫ್‌ಐ ಜಿಂದಾಬಾದ್” ಮತ್ತು “786” ಎಂದು ಬರೆದು ಶನಿವಾರ ನಸುಕಿನಲ್ಲಿ ಹೊಸ ಪನ್ವೆಲ್ ಪ್ರದೇಶದ ಮನೆಯ ಪ್ರವೇಶದ್ವಾರದಲ್ಲಿ ಅಂಟಿಸಿದ್ದರು ಎಂದು ವರದಿಯಾಗಿದೆ.

ಇದಲ್ಲದೆ ಈ ಪ್ರದೇಶದಲ್ಲಿ ಇತರ ಎರಡು ಮನೆಗಳಲ್ಲಿ ಕ್ರ್ಯಾಕರ್ ಬಾಂಬ್‌ಗಳು ಮತ್ತು ಅಗರಬತ್ತಿಗಳನ್ನು ಕಟ್ಟಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿರುವ ಬಗ್ಗೆ ವರದಿಯಾಗಿದೆ.

ಖಂಡೇಶ್ವರ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಈ ಸಂಬಂಧ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಸರಕಾರ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ PFI ಮತ್ತು ಅದರ ಕೆಲ ಸಹವರ್ತಿ ಸಂಘಟನೆಗಳನ್ನು ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಐದು ವರ್ಷಗಳ ಕಾಲ ನಿಷೇಧಿಸಿತ್ತು.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು