PFI ವಿರುದ್ಧದ ಪ್ರಕರಣ, ಮತ್ತೆ 6 ಜಿಲ್ಲೆಗಳಲ್ಲಿ ಎನ್ ಐಎ ದಾಳಿ, ಐವರು ಬಂಧನ

ತಮಿಳುನಾಡು;ರಾಷ್ಟ್ರೀಯ ತನಿಖಾ ಸಂಸ್ಥೆ ಮಂಗಳವಾರ ಮುಂಜಾನೆ ತಮಿಳುನಾಡಿನಾದ್ಯಂತ ಅನೇಕ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕ್ರಿಮಿನಲ್ ಪಿತೂರಿ ಪ್ರಕರಣದ ಭಾಗವಾಗಿರುವ ಆರೋಪದ ಮೇಲೆ ಐವರು ಶಂಕಿತರನ್ನು ಬಂಧಿಸಿದೆ.

ಅಬ್ದುಲ್ ರಜಾಕ್ (47) ಚೆನ್ನೈನ ಮೊಹಮ್ಮದ್ ಯೂಸುಫ್ (35) ಮತ್ತು ಮಧುರೈನ ಮೊಹಮ್ಮದ್ ಅಬ್ಬಾಸ್ (45), ದಿಂಡಿಗಲ್‌ನ ಕೈಜರ್ ಎ (45) ಮತ್ತು ತೇಣಿ ಜಿಲ್ಲೆಯ ಸಾಥಿಕ್ ಅಲಿ (39) ಬಂಧಿತರು.

ಸೆಪ್ಟೆಂಬರ್ 2022ರಲ್ಲಿ PFI ನಿಷೇಧದ ವೇಳೆ ನಡೆದ ಎನ್ ಐಎ ದಾಳಿ ವೇಳೆ ಬಂಧಿತರಿಂದ ಸಿಕ್ಕ‌ ಮಾಹಿತಿ ಆಧರಿಸಿ ಮುಂಜಾನೆ ಕಾರ್ಯಾಚರಣೆಯನ್ನು ನಡೆಸಿದೆ.

ಮಧುರೈ, ಚೆನ್ನೈ, ದಿಂಡಿಗಲ್ ಮತ್ತು ಥೇಣಿ ಸೇರಿದಂತೆ ಆರು ಜಿಲ್ಲೆಗಳ ಪ್ರದೇಶಗಳಲ್ಲಿ ಕಾರ್ಯಚರಣೆ ನಡೆಸಲಾಗಿದೆ.

ನಿಷೇಧಿತ PFIಯ ಕಾನೂನುಬಾಹಿರ ಮತ್ತು ದೇಶ-ವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣವನ್ನು ಆರಂಭದಲ್ಲಿ ಸೆಪ್ಟೆಂಬರ್ 19, 2022 ರಂದು NIA ದಾಖಲಿಸಿದೆ. ಸಂಸ್ಥೆಯು ಮಾರ್ಚ್ 17, 2023 ರಂದು 10 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ನ್ನು ಸಲ್ಲಿಸಿದೆ.

ಪಿತೂರಿಯ ಭಾಗವಾಗಿ, ಆರೋಪಿಗಳು ಹೆಚ್ಚಿನ ಸಂಖ್ಯೆಯ ಪಿಎಫ್‌ಐ ಕಾರ್ಯಕರ್ತರನ್ನು ಸೇರ್ಪಡೆಗೊಳಿಸಿದ್ದಾರೆ. ವಿಶೇಷವಾಗಿ ಯುವಕರು, ಸಂಘಟನೆಯ ನಾಯಕತ್ವದಿಂದ ಆರಿಸಲ್ಪಟ್ಟರು ಮತ್ತು ಅವರಿಗೆ ವಿವಿಧ ರೀತಿಯ ಆಯುಧಗಳ ಬಳಕೆಯ ತರಭೇತಿ, ಆಕ್ರಮಣ ಮಾಡಲು ತರಬೇತಿ ನೀಡಿದ್ದರು ಎಂದು ಆರೋಪಿಸಲಾಗಿದೆ.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com