ನಿಷೇಧಿತ PFI ಮರು ಸಂಘಟನೆಗೆ ಯತ್ನದ ಆರೋಪ, 4 ರಾಜ್ಯಗಳಲ್ಲಿ ಮತ್ತೆ ಎನ್ ಐಎ ದಾಳಿ

ನವದೆಹಲಿ;ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರ ನಿವಾಸಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಉತ್ತರ ಪ್ರದೇಶ, ಬಿಹಾರ, ಪಂಜಾಬ್ ಮತ್ತು ಗೋವಾದ 16 ಸ್ಥಳಗಳಲ್ಲಿ ಶೋಧ ನಡೆಸಿದೆ‌.

ಉತ್ತರ ಪ್ರದೇಶ, ಬಿಹಾರ, ಪಂಜಾಬ್ ಮತ್ತು ಗೋವಾದಲ್ಲಿ ಪಿಎಫ್‌ಐ ಜೊತೆಗಿನ‌ ನಂಟು ಹೊಂದಿರುವವರು ಮತ್ತು ಶಂಕಿತ ಸ್ಥಳಗಳಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ.

ಎನ್‌ಐಎ ಶೋಧಿಸಿದ ಸ್ಥಳಗಳಲ್ಲಿ ಬಿಹಾರದಲ್ಲಿ 12, ಉತ್ತರ ಪ್ರದೇಶದಲ್ಲಿ ಎರಡು ಮತ್ತು ಪಂಜಾಬ್‌ನ ಲೂಧಿಯಾನ ಮತ್ತು ಗೋವಾದಲ್ಲಿ ತಲಾ ಒಂದು ಸ್ಥಳಗಳು ಸೇರಿವೆ ಎಂದು ಮೂಲಗಳು ತಿಳಿಸಿದೆ.

ರಾಜ್ಯ ಪೊಲೀಸ್ ಪಡೆಗಳೊಂದಿಗೆ ನಿಕಟ ಸಮನ್ವಯದಲ್ಲಿ NIA ತಂಡಗಳು ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿದೆ.

ಗೃಹ ವ್ಯವಹಾರಗಳ ಸಚಿವಾಲಯವು PFI ಅನ್ನು ನಿಷೇಧಿಸಿರುವುದರಿಂದ ಮತ್ತು ಅದರ ಉನ್ನತ ನಾಯಕರನ್ನು ಜೈಲಿಗೆ ಹಾಕಿರುವುದರಿಂದ, ಸಂಘಟನೆಯು ತನ್ನ ಕಾರ್ಯಕರ್ತರನ್ನು ಮರುಸಂಘಟಿಸಲು ಮತ್ತು ಬಲಪಡಿಸಲು ಶ್ರಮಿಸುತ್ತಿದೆ ಎಂದು ಆರೋಪಿಸಲಾಗಿದೆ.

ಸೆಪ್ಟೆಂಬರ್ 2022 ರಲ್ಲಿ ‘ಕಾನೂನುಬಾಹಿರ ಸಂಘ’ ಎಂದು ಪಿಎಫ್ ಐಯನ್ನು ಎನ್ ಐಎ ಘೋಷಿಸಿತ್ತು. ಐದು ವರ್ಷಗಳ ಕಾಲ‌ನಿಷೇಧ ಹೇರಿತ್ತು.

ಪಿಎಫ್‌ಐ ಮೇಲೆ ನಿಷೇಧ ಹೇರಿದ್ದರೂ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು ಸಿದ್ಧಾಂತವನ್ನು ಪ್ರಚಾರ ಮಾಡುವುದನ್ನು ಮುಂದುವರೆಸಿದ್ದಾರೆ ಮತ್ತು ಅಪರಾಧಗಳನ್ನು ಎಸಗಲು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವ್ಯವಸ್ಥೆಗೊಳಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಟಾಪ್ ನ್ಯೂಸ್

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ; ಮಕ್ಕಳು ಆಟವಾಡುವಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ

ನವದೆಹಲಿ; ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿರುವ ಶಾಕಿಂಗ್ ಘಟನೆ ರಾಷ್ಟ್ರ

Developed by eAppsi.com