ಬೆಂಗಳೂರು:ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ಅಧ್ಯಕ್ಷ ನಾಸೀರ್ ಪಾಷಾ ಸೇರಿ 15 ಮಂದಿ ಕಾರ್ಯಕರ್ತರ ವಿರುದ್ಧ ಎನ್ ಐಎ ವಿಶೇಷ ನ್ಯಾಯಾಲಯಕ್ಕೆ ಕಾಡುಗೊಂಡನಹಳ್ಳಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ.
ಸುಮಾರು 10,196 ಪುಟಗಳ ಚಾರ್ಜ್ಶೀಟ್ ನ್ನು ಕಾಡುಗೊಂಡನಹಳ್ಳಿ ಪೊಲೀಸರು ನ್ಯಾಯಾಲಯಕ್ಕೆ
ಸಲ್ಲಿಸಿದ್ದಾರೆ.
ಬಂಧಿತ 9 ಕಾರ್ಯಕರ್ತರ ಮೇಲೆ ಯುಎಪಿಎ ಅಡಿ ಕೇಸ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಪಿಎಫ್ ಐ ನಿಷೇಧದ ವೇಳೆ ರಾಜ್ಯಾದ್ಯಂತ ಪಿಎಫ್ ಐ ಸಕ್ರಿಯ ಹಲವು ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಅದರಲ್ಲಿ ಕೆಲವರ ಮೇಲೆ ಯುಎಪಿಎಯಡಿ ಕೇಸ್ ದಾಖಲಿಸಲಾಗಿತ್ತು.