ಮದರಂಗಿ ದಿನವೇ ಕುಸಿದು ಬಿದ್ದು ವಧು ಮೃತ್ಯು, ಮದುವೆ ಮನೆಯಲ್ಲಿ ಮುಗಿಲು ಮುಟ್ಟಿದ ಪೋಷಕರ ರೋಧನ

ಮಲಪ್ಪುರಂ:ಮದುವೆಯ ಮುನ್ನಾ ದಿನ ಮದರಂಗಿ ಕಾರ್ಯಕ್ರಮದ ವೇಳೆ ಕುಸಿದು ಬಿದ್ದು ವಧು ಮೃತಪಟ್ಟಿರುವ ದಾರುಣ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂದಲ್ಮನ್ನ ಎಂಬಲ್ಲಿ ನಡೆದಿದೆ.

ಪಥೈಕ್ಕರ ನಿವಾಸಿ ಮುಸ್ತಫಾ ಮತ್ತು ಝೀನತ್ ದಂಪತಿಯ ಪುತ್ರಿ ಫಾತಿಮಾ(19) ಮೃತ ವಧು.

ಈಕೆಯ ವಿವಾಹ ಇಂದು ಮೂರ್ಕರ್ನಾಡ್ ನ ನಿವಾಸಿ ಯುವಕನೊಂದಿಗೆ ನಡೆಯಬೇಕಿತ್ತು.ಆದರೆ ಮದರಂಗಿ ಸಂಭ್ರಮದ ದಿನವೇ ವಧು ಕುಸಿದು ಬಿದ್ದಿದ್ದಾರೆ.

ತಕ್ಷಣ ಫಾತಿಮಾಗೆ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ ಆದರೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಘಟನೆಯಿಂದ ವಿವಾಹದ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

ಟಾಪ್ ನ್ಯೂಸ್