ವಿಟ್ಲ; ಬೈಕ್ ಅಪಘಾತದ ಗಾಯಾಳು ಪಾಟ್ರಕೋಡಿ ಫಾರೂಕ್ ಮೃತ್ಯು; ವಿವಾಹವಾಗಿ 10 ವರ್ಷಗಳ ಬಳಿಕ ಜನಿಸಿದ ಮೊದಲ ಮಗುವಿನ ಮುಖ‌ನೋಡಲು ಹೋದ ಫಾರೂಕ್ ಗೆ ಆಸ್ಪತ್ರೆ ಬಳಿಯೇ ಸಂಭವಿಸಿತ್ತು ಅಪಘಾತ!

ವಿಟ್ಲ;ಬೈಕ್ ಅಪಘಾತದ ಗಾಯಾಳು ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಮಾಣಿ ಬುಡೋಳಿಯಲ್ಲಿ ನಡೆದಿದೆ.

ಬುಡೋಳಿ ಪಾಟ್ರಕೋಡು ನಿವಾಸಿ ಫಾರೂಕ್(35) ಮೃತರು.

ಇವರಿಗೆ 10 ವರ್ಷಗಳ ಹಿಂದೆ ವಿವಾಹವಾಗಿದ್ದು, ಮಕ್ಕಳಾಗಿರಲಿಲ್ಲ.10 ವರ್ಷಗಳ ಬಳಿಕ ಮೊನ್ನೆಯಷ್ಠೇ ಅವರ ಪತ್ನಿಗೆ ಹೆರಿಗೆಯಾಗಿತ್ತು. ಫಾರೂಕ್ ಮಗುವನ್ನು ನೋಡಲು ದೇರಳಕಟ್ಟೆಯ ಆಸ್ಪತ್ರೆಗೆ ತೆರಳುವಾಗ ದೇರಳಕಟ್ಟೆ ಆಸ್ಪತ್ರೆಯ ಬಳಿಯೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೆ ಅವರು ಇಂದು ಮೃತಪಟ್ಟಿದ್ದಾರೆ.ಫಾರೂಕ್ ನಿಧನದಿಂದ ಕುಟುಂಬದ ರೋಧನ ಮುಗಿಲು ಮುಟ್ಟಿದೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com