100ಕ್ಕೂ ಅಧಿಕ ಬಾರಿ ಚಾಕುವಿನಿಂದ ಇರಿದು ಯುವಕನ ಕೊಲೆ;ಭಯಾನಕ ಕೃತ್ಯ
ಪಾಟ್ನಾ:20 ವರ್ಷದ ಯುವಕನನ್ನು ದುಷ್ಕರ್ಮಿಗಳು 100 ಬಾರಿ ಇರಿದು ಕೊಂದ ಘಟನೆ ಬಿಹಾರದ ಸೀತಮರ್ಹಿ ಎಂಬ ಸ್ಥಳದಲ್ಲಿ ನಡೆದಿದೆ.
ಚಿಂಟು(20)ಮೃತ. ಚಿಂಟುವಿನ ಮುಖ ಹಾಗೂ ದೇಹದ ಮೇಲೆ ಚಾಕುವಿನಿಂದ ತಿವಿದ ಗುರುತುಗಳಿವೆ.ಈತನ ಶವ ಪೊದೆಯೊಂದರಲ್ಲಿ ಪತ್ತೆಯಾಗಿದೆ.
ಸಾವಿಗೂ ಮೊದಲು ಯುವಕನನ್ನು ಚಾಕುವಿನಿಂದ ನೂರು ಬಾರಿ ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತನ ಸಹೋದರ ಈಗ ನೆರೆಮನೆಯ ನಿವಾಸಿ ವಿರುದ್ಧ ಕೊಲೆ ಆರೋಪ ಮಾಡಿದ್ದಾನೆ.
ಸ್ಕ್ರ್ಯಾಪ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದ ಚಿಂಟುವಿಗೆ ತಿಂಗಳ ಹಿಂದೆಯಷ್ಟೇ ಮದುವೆಯಾಗಿದೆ. ಮೃತನ ಸಹೋದರ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಯನ್ನು ಬಂಧಿಸಲಾಗಿದೆ.